ಅಥವಾ

ಒಟ್ಟು 9 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯದ ಕುರುಹುವಿಡಿದು ಬಂದೆನೆಂಬ ಆ ಭಾವದ ಇರವೇತಕ್ಕೆ ನಿಮಗೆ ಅಂಬರದ ಚಾಪ ಮುಗಿಲೊಳಗೆ ಹೊಂದಿತ್ತೆ ಬೇರೊಂದರಲ್ಲಿ ಸಂದಿತ್ತೆ ಅದರಂಗದ ಛಾಯೆ. ಪ್ರಭುದೇವರ ನಿಂದ ಸುಳುಹು ಕೂಡಲಸಂಗಮದೇವರಲ್ಲಿ ಬ್ಥಿನ್ನವಿಲ್ಲದೆ ನಿಂದ ಕಾಯದಂನದಫ.
--------------
ಬಸವಣ್ಣ
ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ ಮಹಾಜ್ಯೋತಿಯಪ್ಪವು ತಪ್ಪದು, ನೋಡಿರೇ ದೃಷ್ಟವ, ಮತ್ತಂತಿಂತೆಂದುಪಮಿಸಲುಂಟೇ ? ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್‍ಭಕ್ತನ ಅಂತರಂಗಬಹಿರಂಗಸರ್ವಾಂಗ ಪರಂಜ್ಯೋತಿರ್ಲಿಂಗವು, ಮತ್ತೆ, ದೇಹವೆಂದು ಪ್ರಾಣವೆಂದು ಆಧಾರಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಬ್ರಹ್ಮರಂಧ್ರವೆಂದು ವರ್ಣ ದಳ ಛಾಯೆ ಅಧಿದೇವತೆಯೆಂದು ವಿವರಿಸಿ ನುಡಿಯಲುಂಟೆ ? ಪಂಚ¨sõ್ಞತಿಕದ ತನುವಿನಂತೆ ಪಂಚವಿಂಶತಿ ತತ್ತ್ವವನು ಸಂಬಂಧಿಸಿ ನುಡಿಯಲುಂಟೇ, ಕೇವಲ ಜ್ಯೋತಿರ್ಮಯಲಿಂಗತನುವಿಂಗೆ ? ಸದ್ಭಕ್ತನ ಅಂಗ ಲಿಂಗ, ಮನ ಲಿಂಗ, ಪ್ರಾಣ ಲಿಂಗ, ಭಾವ ಲಿಂಗ, ಪಂಚವಿಶಂತಿ ತತ್ತ್ವಂಗಳೆಲ್ಲವೂ ಲಿಂಗತತ್ವ. ಇದು ಕಾರಣ, ಲಿಂಗವಂತನ ತನು ಸರ್ವಾಂಗಲಿಂಗವೆಂಬುದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎಲ್ಲಾ ಅಂತರಂಗ ತೃಪ್ತಿಯಾದಲ್ಲಿ, ಮತ್ತತನವಿಪ್ಪುದು ಜಾಗ್ರದಲ್ಲಿ, ದೃಷಾ*ಂತದ ಸ್ವಪ್ನದಲ್ಲಿ. ಛಾಯೆ ಮಾಯೆ ಸುಷುಪ್ತಿಯಲ್ಲಿ, ಬಿಂಬ ಛಾಯೆ ವಾಗ್ವಿಲಾಸಂಗಳಲ್ಲಿ, ಕೇಳಿ ಬಾವಜ್ಞಾನದಿಂದರಿದು, ಮಹಾಜ್ಞಾನದಿಂದ ಕಂಡು, ದಿವ್ಯಜ್ಞಾನದಿಂದ ಪರಿಪೂರ್ಣವಾಗಿ, ನೋಟ ಕೂಟವಿಲ್ಲದೆ, ಕೂಟಕ್ಕೆ ಅಂಗವಿಲ್ಲದೆ, ಅಂಗಕ್ಕೆ ಆತ್ಮನಿಲ್ಲದೆ, ಆತ್ಮಂಗೆ ಭಾವವಿಲ್ಲದೆ, ಭಾವಕ್ಕೆ ಭಾವವಿಲ್ಲದೆ ನಿಂದುದು, ಚಿದ್ಭಾವವಿರಹಿತ ವಸ್ತುವದು, ಧರ್ಮೇಶ್ವರಲಿಂಗದ ಗೊತ್ತು.
--------------
ಹೆಂಡದ ಮಾರಯ್ಯ
ಸಚ್ಚಿದಾನಂದನ ಸಂಕಲ್ಪಮಾತ್ರದಿಂದ ಮಿಥ್ಯಾ ಛಾಯೆ ತೋರಿತ್ತು ನೋಡಾ. ತಥ್ಯವೇ ಶಿವತತ್ತ್ವ, ಮಿಥ್ಯಯೇ ಮಾಯಾಸೂತ್ರದ ಜಗಜ್ವಾಲ ನೋಡಾ. ತಥ್ಯವೇ ತನ್ನ ನಿಜವೆಂದು, ಮಿಥ್ಯವೇ ಹುಸಿಯೆಂದರಿವ ಶಿವತತ್ತ್ವಜ್ಞಾನಿಗಳಪೂರ್ವ ನೋಡಾ. ತಥ್ಯಮಿಥ್ಯವೆಂಬ ಹೊತ್ತುಹೋಕನತಿಗಳೆದ ನಿತ್ಯ ನಿರಂಜನನು ತಾನು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಯುವ ನುಂಗಿದ ಬಣ್ಣ, ಬಣ್ಣವ ನುಂಗಿದ ಛಾಯೆ, ಅಂಜನ ಪ್ರವೇಶಮಧ್ಯದಲ್ಲಿ ಲೀಯವಾದೆನಯ್ಯಾ ನಿನ್ನೊಡನೆ; ಲೀಯವಾದೆನಯ್ಯಾ ಸಂಗಸಂಯೋಗ ಸ್ಥಾನದಲ್ಲಿ ನೀಸಹಿತ. ಯೋಗಿಯಾದೆನಯ್ಯಾ ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರವೇಶಿಸಲೊಡನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸೀಮೆಯ ಮೀರಿ ಸಂಬಂಧಿಯಾದೆನು
--------------
ಸಿದ್ಧರಾಮೇಶ್ವರ
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು. ಆಡಂಬರದ ಪೂಜೆ ತಾಮ್ರದ ಮೇಲಣ ಸುವರ್ಣದ ಛಾಯೆ. ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ ಮನ ಹೂಣದೆ ಮಾಡುವ ಪೂಜೆ ಬೇರು ನನೆಯದೆ ನೀರು, ಆಯವಿಲ್ಲದ ಗಾಯ, ಭಾವವಿಲ್ಲದ ಘಟ ವಾಯವೆಂದ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ, ಹರಿಹರbಜಿಡಿಹ್ಮಾದಿಗಳಿಗೆ ವಶವಲ್ಲ ನೋಡಾ. ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು, ನಡುಮಧ್ಯದಲ್ಲಿ ತಮ ಕಪೋತವರ್ಣ, ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು. ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ, ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು. ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!
--------------
ಅರಿವಿನ ಮಾರಿತಂದೆ
ಪಾಷಾಣ ಘಟ್ಟಿಯಾದಲ್ಲಿ ಪ್ರಭೆ ಪ್ರಜ್ವಲಿಸಿತ್ತು. ಪಾಷಾಣದ ಘಟವಡಗಲಾಗಿ ಪ್ರಭೆ ಪ್ರಕಟಿಸುವುದಿಲ್ಲ. ಕ್ರೀ ಭಿನ್ನವಾದಲ್ಲಿ ಜ್ಞಾನಕ್ಕೆ ಸುಳುಹಿಲ್ಲ. ಅದು ಮುಕುರವ ತೊಡೆದ ಮಲದಂತೆ. ಮಲಕ್ಕೆ ಬೆಳಗುಂಟೆ ಮುಕುರಕ್ಕಲ್ಲದೆ ಮುಕುರಕ್ಕೆ ಛಾಯೆ, ಮಲಕ್ಕೆ ತಮ್ಮ; ಉಭಯದೊದಗನರಿದಲ್ಲಿ ಇಷ್ಟ ಪ್ರಾಣ ಮುಕ್ತಿ. ಅಂಗದ ಮೊರದ ಮಾರಿಯ ಹೊತ್ತು ಬಂದವನ ಯುಕ್ತಿ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಇಕ್ಕಿದಗೊತ್ತು.
--------------
ಡಕ್ಕೆಯ ಬೊಮ್ಮಣ್ಣ
-->