ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಸ್ತ್ರ, ಸಮಾಧಿ, ನೀರು, ನೇಣು, ಮಿಕ್ಕಾದ ವಿಷ ಔಷಧಿಗಳಿಂದ ವ್ರತ ತಪ್ಪಿತೆಂದು ಆತ್ಮಘಾತಕವ ಮಾಡಬಹುದೆ? ವ್ರತ ತಪ್ಪಿತ್ತೆಂದು ತಾನಳಿಯಬಹುದೆ? ಅರಿವು ತೋರಿದಲ್ಲಿಯೆ ಆ ಘಟವ ಮರೆದು ಲಿಂಗವ ಬೆರಸಬೇಕಲ್ಲದೆ. ಹೀಗಲ್ಲದೆ ಊರೆಲ್ಲರ ಕೂಡಿ ಲಾಗಿಗೆ ಸತ್ತೆಹೆನೆಂದು, ಬೇಡಾ ಎಂದಡೆ ಉಳಿದೆಹೆನೆಂಬ ವಿದಾಂತರ ಲಾಗಲ್ಲಾ. ಬಂಧನವಿಲ್ಲದೆ ಲಿಂಗವ ಒಡಗೂಡಬೇಕು ಏಲೇಶ್ವರಲಿಂಗದಲ್ಲಿಗಾಗಿ.
--------------
ಏಲೇಶ್ವರ ಕೇತಯ್ಯ
ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ ಹೊನ್ನು ಹೆಣ್ಣು ಮಣ್ಣಿನ ಮೇಲಣ ಕಾಮವಿಕಾರ ತೋರಿದಡೆ ಅದಕ್ಕೇನೂ ಶಂಕೆಯಿಲ್ಲ. ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು. ಜಲಮಂಡುಕ ಕಚ್ಚಿ ಸತ್ತವರುಂಟೆ? ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ, ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ. ಇದು ಭಕ್ತರಾಚರಣೆ, ವಿರಕ್ತನಿರ್ಣಯ. ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು.
--------------
ಅವಸರದ ರೇಕಣ್ಣ
-->