ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರದವನುಂಡು ಬಂದವ ಹಸಿದಿದ್ದ. ಬೇಯದದು ಬೆಂದು, ಬೆಂದದು ಬೇಯದೆ ಉಭಯವ ಹಿಂಗಿದಂದು ಸಂದು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
--------------
ಬಿಬ್ಬಿ ಬಾಚಯ್ಯ
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ, ಉದಕದ ಹೊಲೆ ಏತರಿಂದ ಹೋಹುದು? ವಾಕು ಪ್ರಮಾಣಿನಿಂದ ಅಗ್ಛಣಿಯೆನಿಸಿತ್ತು. ಸಾಹಿತ್ಯವರಿದು ಕೊ(ಡ)ಳಬಲ್ಲ ಚೆನ್ನನ ಪ್ರಸಾದ ಲಿಂಗಕ್ಕೆ ಓಗರವಾಯಿತ್ತು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯ ವಿರೊಧಿ ಸ್ಪರ್ಶನ, ಭಾವ ವಿರೋಧಿ ದರ್ಶನ, ರುಚಿ ವಿರೋಧಿ ಪ್ರಸಾದಿ. ಕೂಡಲಚೆನ್ನಸಂಗಾ ನಿಮ್ಮ ಶರಣನ ಕಾಯ ಲಿಂಗಕ್ಕೆ ಓಗರವಾಯಿತ್ತು.
--------------
ಚನ್ನಬಸವಣ್ಣ
ಭಕ್ತ, ಪ್ರಸಾದವ ಕೊಂಡು ಪ್ರಸಾದವಾದ ಪ್ರಸಾದ, ಭಕ್ತನ ನುಂಗಿ ಭಕ್ತನಾಯಿತ್ತು. ಭಕ್ತನೂ ಪ್ರಸಾದವು ಏಕಾರ್ಥವಾಗಿ_ಲಿಂಗಸಂಗವ ಮರೆದು, ಭಕ್ತನೆ ಭವಿಯಾದ, ಪ್ರಸಾದವೆ ಓಗರವಾಯಿತ್ತು. ಮತ್ತೆ ಆ ಓಗರವೆ ಭವಿ, ಭವಿಯೆ ಓಗರವಾಯಿತ್ತು. ಓಗರ ಭವಿ ಎಂಬೆರಡೂ ಇಲ್ಲದೆ ಓಗರವೆ ಆಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ, ಪಾಪದ ಬಲೆಯ ತಂದು ಮುಂದೆ ಒಡ್ಡಿದಿರಯ್ಯಾ, ಬೇಟೆಗಾರನು ಮೃಗವನಟ್ಟಿ ಬರಲು ಮೃಗವು ಗೋರಿಗೊಳಗಾಗದಯ್ಯಾ. ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವು ಕೂಡಲಸಂಗಮದೇವಂಗೆ ಓಗರವಾಯಿತ್ತು.
--------------
ಬಸವಣ್ಣ
ನಿಜಸುಖದ ಸಂಗದಿಂದ ನೆನಹಳಿದು, ಶಿವಾನುಭಾವದ ಸುಖದಲ್ಲಿ ಪ್ರಾಣವಡಗಿ ತೃಪ್ತಿಯಾಗಿ ನಿಂದ ನಿಲುವಿನ ನಿರ್ಣಯವೆ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು.
--------------
ಆದಯ್ಯ
ಜಂಗಮವಾರೋಗಿಸಿ ಮಿಕ್ಕುದು ಲಿಂಗಕ್ಕೋಗರ, ಲಿಂಗವಾರೋಗಿಸಿ ಮಿಕ್ಕುದು ಪ್ರಸಾದ-ನೀಡಬಹುದು. ಜಂಗಮಮುಖದಲ್ಲಿ ಓಗರವಾಯಿತ್ತು. ಲಿಂಗಮುಖದಲ್ಲಿ ಪ್ರಸಾದವಾಯಿತ್ತು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿನಗೆ ಎನಗೆ ಜಂಗಮದ ಪ್ರಸಾದ.
--------------
ಚನ್ನಬಸವಣ್ಣ
-->