ಅಥವಾ

ಒಟ್ಟು 13 ಕಡೆಗಳಲ್ಲಿ , 4 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತರಲ್ಲಿಯೂ ತೆರಹಿಲ್ಲವೆನಗೆ ಏತರಲ್ಲಿಯೂ ಕುರುಹಿಲ್ಲವೆನಗೆ; ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ, ಸಂಗಯ್ಯನಲ್ಲಿ ಬಸವ ಪ್ರಸಾದಿಯಾದಬಳಿಕ.
--------------
ನೀಲಮ್ಮ
ಕಾಯವಿಲ್ಲದೆ ಕಾಯಕ್ಕೆ ಕಲ್ಪಿತದ ಸಯದಾನವ ಕೂಡಲಿಕ್ಕಲು ಆಯದ ಖಂಡವಯ್ಯ, ಕಾಯವಿಲ್ಲದೆ ಹೋದ ಬಯಲನುಂಬ ಪ್ರಾಣಿಗೆ ಬಸವನ ಹಂಗೆನಗುಂಟೆಯಯ್ಯ ? ಏತರಲ್ಲಿಯೂ ರೂಪಿಲ್ಲದ ಕಾರಣ ಸಂಗಯ್ಯ, ನಾನು ನಿಮ್ಮ ಹೆಸರಿಲ್ಲದ ಮಗಳು.
--------------
ನೀಲಮ್ಮ
ಸ್ಥಲಂಗಳ ನೋಡಿ ಕಂಡೆಹೆನೆಂದಡೆ, ಅಡಗಿದ ಮಡಕೆಯಲ್ಲ ಆಚಾರದಲ್ಲಿ ನೋಡಿ ಕಂಡೆಹೆನೆಂದಡೆ, ಸಂಕಲ್ಪದೇಹಿಯಲ್ಲ. ಸಕಲ ಆಗಮಂಗಳಲ್ಲಿ ನೋಡಿ ಕಂಡೆಹೆನೆಂದಡೆ, ಮಾತಿನ ಮಾಲೆಯವನಲ್ಲ. ತನುವ ದಂಡಿಸಿ ಕಂಡೆಹೆನೆಂದಡೆ ಬಂಧನದವನಲ್ಲ. ಏತರಲ್ಲಿಯೂ ತೊಡಕಿಲ್ಲದೆ ಸರ್ವವ ನೇತಿಗಳೆಯದೆ ಅಜಾತನಾಗಿ ನಿಂದವಂಗೆ ಆತನೇತರಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಏತರಲ್ಲಿಯೂ ಹೆಸರಿಲ್ಲದ ಕುರುಹು ಈ ವಸ್ತು ಬಸವಯ್ಯನು. ಏತರಲ್ಲಿಯೂ ನೆಲೆಯಿಲ್ಲದ ಮೂರ್ತಿ ಈ ವಸ್ತು ಬಸವಯ್ಯನು. ಏತರಲ್ಲಿಯೂ ತೆರಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು, ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ, ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ, ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದ ಬಳಿಕ.
--------------
ನೀಲಮ್ಮ
ಏಕಾಂಗವೆನಗೆ ಅನೇಕ ಬಸವಾ, ಪ್ರಾಣಪ್ರಸನ್ನವದನೆಯಾದೆನು ಬಸವಾ, ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ, ಇಷ್ಟದ ಸಂಗದ ಕುಳವಳಿದ ಬಳಿಕ ಪ್ರಾಣಯೋಗವಾಯಿತ್ತು ಬಸವಾ, ಸಂಗಯ್ಯಾ, ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದ ಬಳಿಕ.
--------------
ನೀಲಮ್ಮ
ಹುಡಿ ಹತ್ತದ ಗಾಳಿಯಂತೆ, ವಾ[ಸ] ಹತ್ತದ ಸರ್ವಸಾರ ಸಂಬಂಧಿಯಂತೆ, ಭಸ್ಮದಲ್ಲಿದ್ದ ಸುಘಟಿಯ ಬೀಜದಂತೆ, ಘೃತಕಿಸಲಯದಂತೆ ಏತರಲ್ಲಿಯೂ ಬಂಧವಿಲ್ಲದೆ, ಕಟಿತ್ವ ವಕ್ಷದಲ್ಲಿದ್ದ ಮಧುಪಾನದಂತಿರಬೇಕು ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ ಲಿಂಗಕ್ಕೆ ಕೊಡುವುದೆಂತೊ ಅಂಗ ಮನವೆಂಬವನು ? ಲಿಂಗದ ಪರಿಪೂರ್ಣವನು ಕಾಣದಿಹ ಅಂಗಹೀನರಿಗೇಕೆ ವ್ರತಾಚಾರದ ಹೊಲಬು ? ಜೀರ್ಣಪರ್ಣ_ರವಿರಶ್ಮಿ ಜ್ಞೇಯದಂತೆ (ನ್ಯಾಯದಂತೆ?) ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ ಭಕ್ತದೇಹಿಕನಾಗಿ !
--------------
ಅಲ್ಲಮಪ್ರಭುದೇವರು
ಏತರಲ್ಲಿಯೂ ಪರಿಣಾಮವಿಲ್ಲವೇತರಲ್ಲಿಯೂ ಗಮನವಿಲ್ಲ ವೇತರಲ್ಲಿಯೂ ವಿವೇಕದನುಭವವಿಲ್ಲ- ವಪ್ರತಿಮನ ಸುಖವ ಕಂಡು, ಆನು ವಿವೇಕ ವಿವರವ ತಿಳಿದೆನಯ್ಯ. ತಿಳಿದು ಮನೋಹರ ಪ್ರಸನ್ನ ಮೂರುತಿಯ ವಿವರವ ಕಂಡೆನಯ್ಯ ಸಂಗಯ್ಯ.
--------------
ನೀಲಮ್ಮ
ಏತರಲ್ಲಿಯೂ ತೆರಹಿಲ್ಲವೆನಗೆ ಸುಖ ಎನಗೆ; ಸುಖದಿಂದ ವಿಪತ್ತನಳಿದೆನಯ್ಯಾ. ವಿಚಾರವ ತಿಳಿದು ನಿಃಪತಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
-->