ಅಥವಾ

ಒಟ್ಟು 8 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಶುಕ್ತಿ ಅಪ್ಪುವಿಲ್ಲದಿರ್ದಡೆ ಕಟ್ಟೆಯಲ್ಲದೆ ಕಟ್ಟಾಣಿಯಲ್ಲ, ಯುಕ್ತಿವಿದಂಗೆ ಸುಪಥ ದೊರಕಿದಡೆ ವಿರಕ್ತನಾಗಬೇಕು. ಮಾತಿನ ಘಾತಕದಲ್ಲಿ ನಿಹಿತದ ಆಚಾರವ ನುಡಿದಡೆ, ಏತದ ಕುಂಭದಲ್ಲಿ ಜಲವ ತುಂಬಿ ಅನಾಥವೃಕ್ಷಕ್ಕೆ ಎರೆದಂತೆ. ಅರಿವುಹೀನನ ಮಾತು ನೆರೆ ಕೊರತೆಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
--------------
ಸಗರದ ಬೊಮ್ಮಣ್ಣ
ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ, ತ್ರಿವಿಧದ ಆಸೆಗೆ ಸಿಕ್ಕಿ ಸಾವ ತೂತರಿಗೆಲ್ಲಿಯದೊ ಲಿಂಗ ? ಅದೇತರ ನಿರ್ವಾಣ? ಏತದ ಕೂನಿಯಂತೆ, ರಾಟಾಳದಂತೆ, ಭವಪಾಶದಲ್ಲಿ ಬಿದ್ದು ಘಾಸಿಯಾದ ಮತ್ತೆ ನಿನಗಿನ್ನೇತರ ಭಾಷೆಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಸರ್ವಜೀವಕ್ಕೆ ದಯವೆ ಮೂಲಮಂತ್ರ. ಸರ್ವರ ಭೂತಹಿತವೆ ದಿವ್ಯಜ್ಞಾನ. ಇಂತೀ ಉಭಯವನರಿತಲ್ಲಿ ಸದಮಲಪೂಜೆ. ಹೀಗಲ್ಲದೆ ಬೆನ್ನ ತಡಹಿ, ಅನ್ನವನಿಕ್ಕಿ, ತಿನ್ನು ಕೊಲ್ಲು ಎಂಬವನ ಪೂಜೆ. ಅವನನ್ನದ ಹಿರಣ್ಯದ ಒದಗು. ಅವನ ಮಾಟದ ಮರುಳಾಟ, ಏತದ ಕೂನಿಯ ಘಾತದ ವೆಜ್ಜದಂತೆ, ಅವನ ನೀತಿಯ ಇರವು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಭವಿ ನಿರೀಕ್ಷಣೆಯಾದ ದ್ರವ್ಯಂಗಳ ಮುಟ್ಟೆನೆಂಬಲ್ಲಿ ಮುಟ್ಟಿದ ಭೇದವಾವುದು ಹೇಳಿರಣ್ಣಾ. ಧಾನ್ಯ ವಿದಳಫಲ ಪಂಫಲಾದಿಗಳಲ್ಲಿ ಆಯತಕ್ಕೆ ಮುನ್ನವೊ ಆಯತದೊಳಗಾದಲ್ಲಿಯೊ? ಆ ನಿರೀಕ್ಷಣೆ ವ್ರತಕ್ಕೆ ದ್ರವ್ಯ ಮೊದಲಾದ ದ್ರವ್ಯಕ್ಕೆ ವ್ರತ ಮೊದಲೊ, ಅಲ್ಲ, ತಾ ಮಾಡಿಕೊಂಡ ನೇಮವೆ ಮೊದಲೊ? ಇದ ನಾನರಿಯೆ; ನೀವು ಹೇಳಿರಯ್ಯಾ. ಭಾಷೆಗೆ ತಪ್ಪಿದ ಬಂಟ, ಲೇಸಿಗೆ ಒದಗದ ಸ್ತ್ರೀ, ವ್ರತದ ದೆಸೆಯನರಿಯದ ಆಚಾರರ, ಕೂಸಿನವರವ್ವೆ ಹಣದಾಸೆಗೆ ಕರೆದು ತಾ ಘಾಸಿಯಾದಂತಾಯಿತ್ತು. ವ್ರತಾಚಾರದ ಹೊಲಬು ನಿಹಿತವಾದುದಿಲ್ಲ. ಏತದ ತುದಿಯಲ್ಲಿ ತೂತು ಮಡಕೆಯ ಕಟ್ಟಿದಲ್ಲಿ ಬಾವಿಯ ಘಾತಕ್ಕೆಸರಿ. ತೂತಿನ ನೀರಿನ ನಿಹಿತವನರಿಯದವನಂತೆ ವ್ರತಾಚಾರ ಸಲ್ಲದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮಘಾತಕರುಗಳಿಗಿದಸಾಧ್ಯ.
--------------
ಅಕ್ಕಮ್ಮ
ಏತದ ತುದಿಯಲ್ಲಿ ಕಟ್ಟಿದ ಮಡಕೆಯಂತೆ, ಅದ ನೀತಿವಂತರು ಮೆಟ್ಟಿ, ಧರೆ ಪಾತಾಳದ ಉದಕವ ತಂದು ಪಾತ್ರೆಗೆ ಹರಹಿದ ತೆರದಂತೆ, ಸರ್ವಮಯದಲ್ಲಿ ಒಪ್ಪಿಪ್ಪ ವಸ್ತುವನರಿಯದು, ನಿರ್ಜಾತನಾಗಬಲ್ಲಡೆ, ಆತ್ಮನ ಜೀವನ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭೂಮಿಯ ಮಧ್ಯದಲ್ಲಿ ಒಬ್ಬ ಗಾಣಿಗ ಸ್ಥಾಣುವ ನೆಟ್ಟು, ಮೊದಲೊಂದು ಬಾಯಿಮೂರು, ಕೊಂತವಾರು, ಎಂಟೆತ್ತು, ನೊಗ ಹದಿನಾರು, ಕೊರಳಕಣ್ಣಿ ನೂರೊಂದು. ಇಂತಿವ ಕೂಡಿ ಹೊಡೆಯಲಾಗಿ, ಒರಳ ಬಾಯಿಗೆ ಏರಿದ ಹಲಗೆಗೆ ಮೇಲೆ ಏತದ ಸೂತ್ರಕ್ಕೆ ಒಂದೆ, ಇದ ಹೇಳು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಭಾಷೆ ತಪ್ಪಿದ ಬಂಟ, ನಿಹಿತವಿಲ್ಲದವನ ಅರಿವು, ದಾತನರಿದವನ ದೊರೆತನ, ತೂತಕುಂಭದ ಏತದ ಘಾತದಂತೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
-->