ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತನ್ನಾಸೆಯ ಹರಿದು ಶಿಷ್ಯಂಗೆ ಅನುಜ್ಞೆಯ ಮಾಡಿದಾಗವೆಬ್ರಹ್ಮಪಾಶ ಹರಿದುದು.ವೇಷಧಾರಿಗಳಲ್ಲಿ ಹೊಗದೆ ಈಷಣತ್ರಯವ ಬಿಟ್ಟುನೆರೆ ಈಶನನರಿತುದೆ ಆ ಭಕ್ತಂಗೆ ವಾಸವನ ಲೇಸಕಿತ್ತುದು.ಇಂತೀ ಗುರುಚರದ ಉಭಯವನರಿತ ಸದ್ಭಕ್ತನ ಶರೀರವುಸದಾಶಿವಮೂರ್ತಿಲಿಂಗವು ತಾನೆ.
ಕೂಟಗೆಯ ಕೂಳನುಣ್ಣಬಂದವರೆಲ್ಲರೂ ಅಜಾತನ ನಿಲವ ಬಲ್ಲರೆ ?ಬೇಟದ ಕಣ್ಣಿನವರೆಲ್ಲರೂ ಸಕಳೇಶನ ಬಲ್ಲರೆ ?ಈಷಣತ್ರಯವ ಕೂಡುವರೆಲ್ಲರೂ ಪರದೇಶಿಗನ ಕೂಡಬಲ್ಲರೆ ?ಆಶೆಯೆಂಬ ಕೊಳದಲ್ಲಿದ್ದು, ನಿರಾಶೆಯ ನಿರ್ನಾಮವ ಬಲ್ಲರೆ ?ದೋಷದೂರ ನಿರ್ಜಾತನು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
ಒಂದಾಸೆಯ ಕುರಿತು ಸರ್ವಮಾತಿಂಗೆ ಒಡಲಾಯಿತ್ತು,ಒಂದಾಸೆ ಅರತು ನಿಂದಡೆ ಈಶಮೂರ್ತಿ ತಾನಾಗಿಪ್ಪ.ಇಂತೀ ಉಭಯದ ಆಸೆಯಲ್ಲಿ ಘಾಸಿಯಾಗುತ್ತ, ಮಾತಿನ ಮಾಲೆ ಬೇಡ.ಆಸೆಯ ಪಾಶವ ಹರಿದು ಈಷಣತ್ರಯವ ಕಿತ್ತು,ನಿರ್ಜಾತನಾಗಿದ್ದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.