ಪ್ರಾರಂಭ ಪದದ ಹುಡುಕು
ಔ ಪದದಿಂದ ಪ್ರಾರಂಭವಾಗುವ ವಚನಗಳು
ಔದುಂಬರದ ಕುಸುಮದಲ್ಲಿ ಪಾದರಿ ಫಲವಾಗಿ,ಆ ಫಲಬಿಂದು ಎಲವದ ಮರದಲ್ಲಿ ಹಣ್ಣಾಯಿತ್ತು.ಆ ಹಣ್ಣನೊಡೆದು ನೋಡಲಾಗಿ, ರಸವಿಲ್ಲದೆ ತುಷಾರ ಹಾರಿತ್ತು.ಇಂತೀ ಅಂಗವಿದ್ದು, ನಿರಂಗವಾಗಬಲ್ಲಡೆ,ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವನೆಂಬೆ.
ಔಷಧಿಯ ಕೊಂಡು ಬಿಸಿಹಾಲು ಕುಡಿಯದೆಹಸಿಹಾಲವ ಕುಡಿದು ಮಹಿಷಾಸುರನ ಮಗನಾಗಿರ್ಪರು,ನಾನು ಔಷಧಿಯ ಕೊಂಡು ಹಸಿಹಾಲು ಕುಡಿಯದೆಬಿಸಿಹಾಲು ಕುಡಿದು ಹಿಂಗಿ ನುಂಗಿಉಸುರದೆ ಕಾಯಕವ ಮಾಡುತ್ತಿರ್ಪೆನುಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.