ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಗಿಯ ಹುಲ್ಲಿನ ಸೋಂಕಿನಂತೆ ತನು ಪುಳಕಿತಳಾದಳವ್ವೆ. ನುಡಿ ತೊದಳು ಆತನ ಒಲವೆ ಆಧಾರವಾಗಿದ್ದಳವ್ವೆ. ಬಿಳಿಯ ತುಂಬಿ ಕುಂಕುಮ ರಸದಲ್ಲಿ ಬಂಡುಂಡಂತೆ. ಮಹಾಲಿಂಗ ಗಜೇಶ್ವರನಲ್ಲಿ ತನ್ನಲ್ಲಿ ತಾನೆ ರತಿಯಾಗಿರ್ದಳವ್ವೆ
--------------
ಗಜೇಶ ಮಸಣಯ್ಯ
ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ. ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ. ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ. ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ.
--------------
ಗಜೇಶ ಮಸಣಯ್ಯ
ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ ರೂಪು ಹೊಲೆಯನಾಗಬಲ್ಲುದೆ ಅಯ್ಯಾ? ಮತ್ರ್ಯಲೋಕದ ಮಾನವರೊಳಗೆ ಶರಣ ಸುಳಿದಡೆ ಶರಣ ಸೂತಕಿಯಾಗಬಲ್ಲನೆ ಅಯ್ಯಾ? ಮತ್ರ್ಯರ ಭವಿಯ ಮಾತ ವರ್ತಮಾನವೆಂಬ ಜೀವಿಗಳ ಆಗೆದೊಗೆಯದೆ ಮಾಬನೆ ಮಹಾಲಿಂಗ ಗಜೇಶ್ವರಯ್ಯ
--------------
ಗಜೇಶ ಮಸಣಯ್ಯ
ಮೂಗಿನ ಕಪ್ಪು ಪ್ರಣತೆಯ ಕತ್ತಲೆ ಜ್ಯೋತಿಯೆಂಬರು. ವಿವರಣೆ ಹೋಗದೆಂತೂ ರಸದ ರುದ್ರಾಕ್ಷಿ ಸ್ಫಟಿಕದ ಧಾರಂಬೊ. ಮಾಣಿಕ್ಯ ಸ್ವಯಂಜ್ಯೋತಿ ಜ್ಞಾನದ ಪ್ರಭೆ. ಮಹಾಲಿಂಗ ಗಜೇಶ್ವರನ ನೆನೆವ ಮನವು ಕಮಳ ತಳವೆಳಕು ಭೋ.
--------------
ಗಜೇಶ ಮಸಣಯ್ಯ
ಮೂಗಿನ ತುಂಬಿಗೆ ಪರಿಮಳ ಒತ್ತಿಹವೆಂದು ಅಂಗಸಂಗದಲ್ಲಿಕ್ಕಿ ಮುಚ್ಚುವೆನವ್ವಾ. ಮನವ ಮರೆದ ಮದಾಳಿಯ ನೇಹದಂತಾದೆನವ್ವಾ, ಮಹಾಲಿಂಗ ಗಜೇಶ್ವರನನುಭಾವಕ್ಕೆ ಸುಖಿಯಾಗಿ.
--------------
ಗಜೇಶ ಮಸಣಯ್ಯ