ಕ ಪದದಿಂದ ಪ್ರಾರಂಭವಾಗುವ ವಚನಗಳು:
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆಕೈದೇನ ಮಾಡುವುದು ?ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆವಿಷವೇನ ಮಾಡುವುದು ?ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?
ಕುರುಡನ ಕೈಯ ಕೋಲು ದೃಢವೆಂದರಿವಂತೆ,ನೆರೆ ಕುರಿತ ಮನವು ಜ್ಞಾನವ ಸ್ಥಿರಕರಿಸಿದಂತೆ,ಅದ ಮರೆಯಾ, ಜಾಂಬೇಶ್ವರಾ.