ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ತನ್ನ ಗುಣವ ತಾನರಿತೆನೆಂಬಲ್ಲಿ, ಇದಿರಿನಲ್ಲಿ, ಬ್ಥಿನ್ನಗುಣವ ಸಂಪಾದಿಸಲುಂಟೆ ? ಕರಿ ಮುಕುರದ ಇರವು, ಆ ಗುಣವ ಪರಿಹರಿಸಿ ನಿಂದಲ್ಲಿ, ಉಭಯಭಾವಕ್ಕೆ ಹೊರಗು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ತಾನೆಂಬುದ ಅರಿದೆನೆಂದರಿತಲ್ಲಿ, ಇಷ್ಟಲಿಂಗದ ಪೂಜೆಯ ಗೊತ್ತು. ಆ ಇಷ್ಟವ ನೆನೆವ ಚಿತ್ತ, ಕರ್ಪುರದ ಘಟ್ಟಿಯ ಉರಿ ಕೊಂಡಂತೆ. ತೊಳೆವ, ಹಿಳಿಕ ಸೂತಕ ನಿಂದಲ್ಲಿ, ಪ್ರಾಣಲಿಂಗಸಂಬಂಧವೆಂಬ ಸಮಯಸೂತಕ ನಿಂದಲ್ಲಿ, ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ