ಲ ಪದದಿಂದ ಪ್ರಾರಂಭವಾಗುವ ವಚನಗಳು:
ಲಿಂಗದೇಹಿಯ ಅಂಗದಲ್ಲಿ ತೋರುವ ತೋರಿಕೆ,ಬೇರೊಂದು ಪ್ರಕೃತಿಭಾವದಲ್ಲಿ ಕಂಡಡೆ,ಲಿಂಗದ ಅಂಗವಾದುದಕ್ಕೆ ಅದೇ ದೂರ.ಅರಿದು ಮರೆವುದೆಲ್ಲ ಲಿಂಗಮಯವಾಗಿ,ಪರುಷದ ಪುತ್ಥಳಿಯಂತೆ, ಎಲ್ಲಿ ಮುಟ್ಟಿದಡಲ್ಲಿಲೋಹಕುಲ ಶುದ್ಧವಾದಂತೆ, ಅಂಗಲಿಂಗಸಂಯೋಗ.ಇಂತೀ ಭಾವ ಅಳವಟ್ಟಲ್ಲಿ, ಉಭಯಗುಣ ಶುದ್ಧ,ಮನಸಂದಿತ್ತು ಮಾರೇಶ್ವರಾ.