ಉ ಪದದಿಂದ ಪ್ರಾರಂಭವಾಗುವ ವಚನಗಳು:
ಉರಿವ ತೃಣದ ಮೇಲೆ ಪುಣ್ಯವ ತಂದಿರಿಸಿದಡೆಆ ತೃಣವನ್ನು ಆ ಕೆಂಡ ನುಂಗುವಂತೆಗುರುಚರಣದ ಮೇಲೆ ತನುತೃಣವನಿರಿಸಿದಡೆಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ.
ಉಣ್ಣಿ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ?ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನುಆ ಉಣ್ಣಿಯಿಂದ ಕರಕಷ್ಟ! ರಾಮನಾಥ.
ಉಳುವನ ಹೆಳೆವನ ಉಳುವವನ ಕೊಲುವಬೇಡನ, ಹಿಳಿಲಿನಿಕ್ಕಿ ಕರದುಂಬ ಭಕ್ತನಒಳುಹನೇನೆಂಬೆ, ರಾಮನಾಥ.
ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿಸಮಗಾಲನಿಕ್ಕಿ ಅಣಿಯೇಳ ಮುಟ್ಟದೆಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ.