ಷಡುರುಚಿಯನರಿವನ್ನಕ್ಕ ಬೇಟದ ಚುನ್ನ ಬಿಡದು.
ಬೇಟ ಬಲಿದ ಮತ್ತೆ ಕೂಟಕ್ಕೆ ಸಮೀಪ.
ಸಂಭೋಗದ ಸುಖ ಮೈಯುಂಡವಂಗೆ,
ಲೋಕದ ನಚ್ಚು ಮಚ್ಚಿನ ಬಲೆದೊಡಕು ತಪ್ಪದು.
ಇನಿತುಳ್ಳನ್ನಕ್ಕ ನಿರಂಗ ನಾನೆಂಬ ಮಾತು ಸಟೆ.
ಇನಿತುಳ್ಳ ಅನಂಗಸಂಗಿಗಳಿಗೆ ಭಕ್ತಿ ವಿರಕ್ತಿ ಎಲ್ಲಿಯದೊ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?