ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕಾಯವ ಶುದ್ಧವ ಮಾಡಿದಾತ ಸಂಗನಬಸವಣ್ಣನು. ಎನ್ನ ಜೀವನ ಶುದ್ಧವ ಮಾಡಿದಾತ ಚೆನ್ನಬಸವಣ್ಣನು. ಎನ್ನ ಪ್ರಾಣವ ಶುದ್ಧವ ಮಾಡಿದಾತ ಮಡಿವಾಳಯ್ಯನು. ಎನ್ನ ತನುವ ಶುದ್ಧವ ಮಾಡಿದಾತ ಮೋಳಿಗಯ್ಯನು. ಎನ್ನ ಮನವ ಶುದ್ಧವ ಮಾಡಿದಾತ ಸಿದ್ಧರಾಮಯ್ಯನು. ಎನ್ನ ಭಾವವ ಶುದ್ಧವ ಮಾಡಿದಾತ ಬಿಬ್ಬಿ ಬಾಚಯ್ಯನು. ಎನ್ನ ಅಂತರಂಗವ ಶುದ್ಧವ ಮಾಡಿದಾತ ಚಂದಯ್ಯನು. ಎನ್ನ ಬಹಿರಂಗವ ಶುದ್ಧವ ಮಾಡಿದಾತ ಕಿನ್ನರಿ ಬ್ರಹ್ಮಯ್ಯನು. ಎನ್ನ ಸರ್ವಾಂಗವ ಶುದ್ಧವ ಮಾಡಿದಾತ ಪ್ರಭುದೇವರು. ಬಸವಣ್ಣಪ್ರಿಯ ಧರ್ಮೇಶ್ವರಾ, ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವನು ಅಂತಿಂತೆನಲ್ಲಮ್ಮದೆ ನಮೋ ನಮೋ ಎನುತಿರ್ದೆನಯ್ಯಾ.
--------------
ಬಸವಣ್ಣಪ್ರಿಯ ಧರ್ಮೇಶ್ವರ