ಶ್ಲೋಕ || `ಶೈವಂ ವೈಷ್ಣವಂ ಶಾಕ್ತಂ ಕೌಮಾರಂ ಗಾಣಪತ್ಯಕಂ | ಸೌರಂ
ಚಾಖಿಲದೈವತ್ಯಂ ಪೂಜನಂ ಚ ಸಮಾಚರೇತ್' ಇಂತೆಂದು ಸಿಂಹಾಸನದಲ್ಲಿ
ಸ್ಥಾಪಿಸಲ್ಪಟ್ಟ ಲಿಂಗದ ಪೂಜೆಯನು ಆವರಣಸ್ಥರಾದ ವಿಷ್ಣುಪ್ರತಿಮಾಪೂಜೆಯನು
ದೇವಿಯ ಪೂಜೆಯನು ಷಣ್ಮುಖಪೂಜೆಯನು ವಿಷ್ನೇಶ್ವರಪೂಜೆಯನು ಸೂರ್ಯ
ಪೂಜೆಯನು ಅವನಾನೊಬ್ಬ ವೈದಿಕಶೈವನು ಈ ಪಂಚಪೂಜಾಸಹವಾಗಿ ಇಂದ್ರಾದ್ಯಖಿಲ
ದೇವತಾಪೂಜೆಯನು ಆಚರಿಸೂದಯ್ಯಾ, ಶಾಂತವೀರೇಶ್ವರಾ.