ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (1) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾದದಲ್ಲಿ ಪಾದೋದಕ. ಆ ಪಾದತೀರ್ಥವನು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬ ಇಚ್ಫೆ ಹುಟ್ಟಿದಲ್ಲಿ ಲಿಂಗೋದಕ. ಮಜ್ಜನಕ್ಕೆರದಲ್ಲಿ ಮಜ್ಜನೋದಕ. ಜಿಹ್ವೆಯಲ್ಲಿ ಪಂಚಾಂಗುಲದಿ ಸ್ವೀಕರಿಸಿದ್ದೇ ಸ್ಪರ್ಶನೋದಕ. ಎಚ್ಚರಿಕೆ ಸಾವಧಾನದಿಂದ ಸೇವಿಸಿದ್ದೇ ಅವಧಾನೋದಕ. ಸಲಿಸಿ ಸಂತೋಷವಾದರೆ ಆಪ್ಯಾಯನೋದಕ. ಹಸ್ತದೊಳಗಿರ್ದ ತೀರ್ಥವನು ಸಲಿಸಿದ್ದೇ ಹಸ್ತೋದಕ. ಆ ಬಟ್ಟಲಲ್ಲಿದ್ದ ತೀರ್ಥವನು ಮೂರುಸಲ ಸ್ವೀಕರಿಸಿದ್ದೇ ಪರಿಣಾಮೋದಕ. ಆ ಪಾದೋದಕವನು ಅಂತಿಂತೆಂದು ಹೆಸರಿಡಲಿಲ್ಲವಾಗಿ ನಿರ್ನಾಮೋದಕ. ಬ್ರಹ್ಮರಂಧ್ರದಲ್ಲಿರ್ದುದೇ ಚಿದಮೃತವೆಂದು ಭಾವಿಸುವುದೇ ಸತ್ಯೋದಕ. ಇಂತೀ ದಶವಿಧ ಪಾದೋದಕವನು ಎನ್ನಂತರಂಗದಲ್ಲಿ ತಿಳಿದು ನಾನು ಸದ್ಯೋನ್ಮುಕ್ತನಾದೆನಯ್ಯಾ ಗುರುಶಾಂತೇಶ್ವರಾ.
--------------
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ