ಅಥವಾ
(2) (3) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (1) (0) (0) (0) (0) (0) (0) (0) (0) (0) (1) (0) (1) (1) (0) (1) (1) (1) (0) (0) (0) (0) (1) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?
--------------
ನಿಜಗುಣಯೋಗಿ
ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ ಆನಿಲ್ಲದಿರ್ದಡೆ ನೀನಿಲ್ಲ. ಆನು ನೀನೆಂಬುಭಯವಳಿಯಲು ಆನಂದ ನಿಜಗುಣಯೋಗ.
--------------
ನಿಜಗುಣಯೋಗಿ
ಆರರ ಅಂತ್ಯವು ಮೂರರ ಅಂತ್ಯವು ಒಂದೆ, ಭಾವ ಅವು ಆವಾವವಯ್ಯ ಎಂದಡೆ; ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ ಇಂತೀ ಆರು ಸ್ಥನ ಬಾಹ್ಯವೆಂಬೆ. ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು. ಅದರ ಕ್ರಮವೆಂತೆಂದಡೆ: ಇಂತೀ ಮೂರು ಸ್ಥಾನದ ಮೇಲಣ ಸಹಸ್ರದಳಕಮಲದೊಳಗೆ ತೋರುವ ನಾಲ್ಕು ಕೋಣೆಯ ಚೌಕಮಧ್ಯ ಅದರೊಳಗಿಪ್ಪ ಅಮೃತಮಯಲಿಂಗವ ಕಂಡು ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ.
--------------
ನಿಜಗುಣಯೋಗಿ