ಅಥವಾ
(2) (1) (0) (0) (0) (0) (0) (0) (1) (0) (0) (0) (0) (0) ಅಂ (2) ಅಃ (2) (1) (0) (3) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (1) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ, ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ, ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ, ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ, ಲಿಂಗವ ಕೂಟ ಕೂಡುವ ಏಕವಾಗಿರಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.
--------------
ಆನಂದಯ್ಯ
ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು. ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು. ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು. ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ, ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು, ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ. ಇಂತೀ ಭಿನ್ನಭಾವನಲ್ಲ, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ.
--------------
ಆನಂದಯ್ಯ
ಗುರುವಿಂಗೆ ಗುರುವುಳ್ಳನ್ನಕ್ಕ, ಲಿಂಗಕ್ಕೆ ಲಿಂಗವುಳ್ಳನ್ನಕ್ಕ ಜಂಗಮಕ್ಕೆ ಜಂಗಮವುಳ್ಳನ್ನಕ್ಕ, ಆತ್ಮಂಗೆ ಅರಿವುಳ್ಳನ್ನಕ್ಕ, ಅರಿವು ಮರವೆಗೆ ಇದಿರೆಡೆಯುಂಟು. ಗುರುವೀಂಗೆ ಉಭಯವಿಲ್ಲದೆ, ಲಿಂಗಕ್ಕೆ ಉಭಯವಿಲ್ಲದೆ, ಜಂಗಮಕ್ಕೆ ಉಭಯವಿಲ್ಲದೆ, ಆತ್ಮಂಗೆ ಎರಡಳಿದು, ನಿಜ ಏಕವಹನ್ನಬರ ಒಂದನಹುದು ಒಂದನಲ್ಲಾ ಎಂದು ಸಂದೇಹಕ್ಕೆ ಒಡಲಾಗಬಾರದು. ತಾ ನಿಂದ ನಿಂದಲ್ಲಿಯೇ ಸಂದಳಿಯಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
--------------
ಆನಂದಯ್ಯ