ಅಥವಾ
(7) (3) (4) (0) (2) (0) (0) (0) (1) (2) (2) (2) (2) (0) ಅಂ (1) ಅಃ (1) (4) (2) (3) (1) (0) (0) (0) (2) (0) (0) (0) (0) (0) (0) (0) (6) (0) (2) (2) (7) (6) (0) (1) (6) (3) (0) (3) (0) (3) (14) (3) (1) (8) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬಲ್ಲಿ ಇಚ್ಫಾಶಕ್ತಿಗೆ ಪುರುಷನಾರು ? ಕ್ರಿಯಾಶಕ್ತಿಗೆ ಪುರುಷನಾರು ? ಜ್ಞಾನಶಕ್ತಿಗೆ ಪುರುಷನಾರು? ಜ್ಞಾತೃ, ಜ್ಞಾನ, ಜ್ಞೇಯವೆಂಬಲ್ಲಿ ಶಕ್ತಿಪುರುಷತ್ವಕ್ಕೆ ಸ್ಥೂಲ, ಸೂಕ್ಷ್ಮ, ಕಾರಣ ಇಂತೀ ತನುತ್ರಯದಲ್ಲಿ ಕಾಬುದೊಂದು ಕಾಣಿಸಿಕೊಂಬುದೊಂದು. ಉಭಯದ ಮನದಲ್ಲಿ ನಾನಾರೆಂಬುದ ಅರಿವುದದೇನು ? ಮುಕುರವ ಹಿಡಿದು ನೋಡುವನಂತೆ ಹಿಡಿವವನಾರು, ಮುಕುರವೇನು ? ಅಲ್ಲಿ ತೋರುವ ಬಿಂಬವೇನು ? ಮುಕುರವೊಂದು, ನೋಡುವೆಡೆಯಲ್ಲಿ ಮೂರಾದ ಭೇದವನರಿತು ಆ ಮುಕುರವೇ ಶಕ್ತಿಯೊ, ಬಿಂಬವೇ ಪುರುಷನೊ ? ಈ ಉಭಯವ ಸಂದೇಹಕ್ಕಿಕ್ಕಿ ನೋಡುವಾಗ ತ್ರಿವಿಧಶಕ್ತಿಯಲ್ಲಿ ಅಡಗಿತ್ತೆಂಬುದನರಿವುದಕ್ಕೆ ದೃಷ್ಟ: ತಿರುಳಿಲ್ಲದ ಬೀಜ ಬೆಳೆದುದುಂಟೆ ? ಮೃತಘಟದ ಚಕ್ಷು ಲಕ್ಷಿಸಿ ಕಂಡುದುಂಟೆ ? ಅಪ್ಪು ಬಟ್ಟೆಯಲ್ಲಿ ಹೋಹ ತೆಪ್ಪದ ಮೇ[ಗ]ಣವನಂತೆ ಒತ್ತುವುದು ನಿಂದಲ್ಲಿ ಅಪ್ಪು ತನ್ನ ಇಚ್ಫೆಗೆ ಆ ತೆಪ್ಪವ ಕೊಂಡು ಹೋಹ ತೆರದಂತೆ ಇಚ್ಫಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬವು ಜ್ಞಾತೃ, ಜ್ಞಾನ, ಜ್ಞೇಯಗಳೆಂಬವು ಸ್ಥೂಲ, ಸೂಕ್ಷ್ಮ, ಕಾರಣ ತನುತ್ರಯಂಗಳೆಂಬವು ಇಂತಿವೆಲ್ಲವು ಶಕ್ತಿಸಂಪುಟವಾಗಿ ದ್ವೈತಾದ್ವೈತಂಗಳಲ್ಲಿ ಹೊರಳಿ ಮರಳುವವಾಗಿ, ವೀಣೆಯ ನಿಚ್ಚಣಿಗೆಯಂತೆ ಸ್ಥಾನ ಸ್ವಸ್ಥಾನಂಗಳಲ್ಲಿ ನಿಂದು ಸಪ್ತಸ್ವರವ ಲಕ್ಷಿಸಿದಂತೆ ಇಂತೀ ಲಕ್ಷ ಜೀವಾಳದಲ್ಲಿ ಅಡಗಿ ಆ ಜೀವಾಳ ನಾದಕ್ಕೆ ಅರಸಾಗಿ ಆ ಭೇದದಂತೆ ಆತ್ಮತತ್ವ ನಿಶ್ಚಯಪದವಾಗಲಾಗಿ ಅದು ಐಕ್ಯಸ್ಥಲ ನಾಮನಷ್ಟಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಇಂತೀ ವಾಚಾಶ್ರುತಿಗಳಲ್ಲಿ ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಪಂಚಾಶತ್ಕೋಟಿ ವಿಸ್ತೀರ್ಣದೊಳಗಾದ ಕವಿ ಗಮಕಿ ವಾದಿ ವಾಗ್ಮಿಗಳು ಮುಂತಾದ ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು ಷಟ್ಸ್ಥಲಬ್ರಹ್ಮ ಪಂಚವಿಂಶತಿತತ್ವ ಶತ ಏಕಸ್ಥಲ ಮುಂತಾದ ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ ಅನಾದಿವಸ್ತುವಿನ ಬೀಜರೇಣು. ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ ಚೆನ್ನಬಸವಣ್ಣ ಪ್ರಭು ತ್ರೈಮೂರ್ತಿಗಳು. ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ ಸ್ಥೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ ರೂಪು, ರುಚಿ, ಗಂಧ ಸೌಖ್ಯಸಂಬಂಧವಾದಂತೆ ಮತ್ರ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಇಷ್ಟಲಿಂಗವೆಂಬುದ ಕೊಟ್ಟು ತಾ ಸಂಸಾರದ ಬುಟ್ಟಿಯೊಳಗನ್ನಕ್ಕ ಕರ್ಮಕಾಂಡ. ಆತ್ಮಬೋಧೆಯ ವೇಧಿಸಬೇಕೆಂದು ವಾದಿಸಿ ಸರ್ವಚೇತನದಲ್ಲಿ ಭ್ರಾಂತನಾಗಿ ತಿರುಗುತ್ತ ಇಪ್ಪವನ ನಿಹಿತದ ಮಾತು ಭವಪಾಶದ ಗ್ರಾಸ. ಇಂತೀ ನಿಹಿತವನರಿತು ಅಷ್ಟವಿಧಾರ್ಚನೆಗೆ, ಮುಕ್ತಿ ನಿಜತತ್ವಕ್ಕೆ ನಿರವಯ ದೃಷ್ಟಕ್ಕೆ ದೃಷ್ಟವಸ್ತುವನಿತ್ತು ತಾ ನಿಶ್ಚಯದಲ್ಲಿ ನಿಜವಾಸಿಯಾಗಬಲ್ಲಡೆ ಕರ್ತೃಭೃತ್ಯತ್ವವೆಂಬುದು ನಿಶ್ಚಯ ನೋಡಾ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದು.
--------------
ಪ್ರಸಾದಿ ಭೋಗಣ್ಣ
ಇಂತೀ ಸ್ಥಲ ಕುಳಂಗಳಲ್ಲಿ ವೇಧಿಸಿ ಭೇದಿಸಿಹೆನೆಂದಡೆ ನಾಲ್ಕು ವೇದ ಹದಿನಾರು ಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳೊಳಗಾದ ಶಬ್ದಶಾಸ್ತ್ರ, ಸಂಸ್ಕøತ, ಅಕ್ಷರಜ್ಞತ್ವ, ಭರತಶಿಲ್ಪ ಮುಂತಾದ ಕ್ರಿಯಾಕಾರಕಂಗಳ ತಿಳಿದು ನೋಡಿದರೂ ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಪ್ರಸಾದಿ ಭೋಗಣ್ಣ