ಅಥವಾ

ಒಟ್ಟು 6 ಕಡೆಗಳಲ್ಲಿ , 3 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿದ್ದಿರಯ್ಯಾ. ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯಾ. ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯಾ. ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯಾ. ಷಷ* ಕಾಲದಲ್ಲಿ ಪರಮಪುರುಷಾರ್ಥಸಾಧನವಾಗಿ, ತ್ರಿವಿಧಭಕ್ತಿಗೆ ನೀವೇ ಕಾರಣವಾಗಿ ಬಂದಿರಿ ಪ್ರಮಥರು ಸಹಿತ, ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ತ. ಬೆಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೆ ನಿಮ್ಮ ಕರಸ್ಥಲದಲ್ಲಿ ಕೂಡಲಚೆನ್ನಸಂಗಮದೇವಾ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಇನ್ನು ಪ್ರಣವದ ಲಕ್ಷಣವದೆಂತೆಂದಡೆ : ಪ್ರಥಮ ತಾರಕ ಸ್ವರೂಪವಾಗಿಹುದು. ದ್ವಿತೀಯ ದಂಡಸ್ವರೂಪವಾಗಿಹುದು. ತೃತೀಯ ಕುಂಡಲಾಕಾರವಾಗಿಹುದು. ಚತುರ್ಥ ಅರ್ಧಚಂದ್ರಕಾಕಾರವಾಗಿಹುದು. ಪಂಚಮ ದರ್ಪಣಾಕಾರವಾಗಿಹುದು. ಷಷ* ಜ್ಯೋತಿಸ್ವರೂಪವಾಗಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ*ಂ ಜ್ಯೋತಿಸ್ವರೂಪಕಂ | ಇತಿ ಪ್ರಣವಂ ವಿಜ್ಞೇಯಂ ಯದ್ಗೋಪ್ಯಂ ವರಾರನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಖಂಡಜ್ಯೋತಿರ್ಮಯವಾಗಿ ಪರಮೋಂಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಹುಟ್ಟಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ``ಓಂಕಾರಜ್ಯೋತಿರೂಪೇ ಚ ಭಾವಹಸ್ತಶ್ಚ ಜಾಯತೇ | ಓಂಕಾರದರ್ಪಣಾಕಾರೇ ಜ್ಞಾನಹಸ್ತಶ್ಚ ಜಾಯತೇ | ಓಂಕಾರ ಅರ್ಧಚಂದ್ರಂ ಚ ಮನೋಹಸ್ತಶ್ಚ ಜಾಯತೇ | ಓಂಕಾರ ಕುಂಡಲಾಕಾರೇ ನಿರಹಂಕಾರಶ್ಚ ಜಾಯತೇ || ಓಂಕಾರದಂಡರೂಪೋ ಚ ಬುದ್ಧಿಹಸ್ತಶ್ಚ ಜಾಯತೇ | ಓಂಕಾರ ತಾರಕರೂಪೋ ಚಿತ್ತಹಸ್ತಶ್ಚ ಜಾಯತೇ | ಇತಿ ಷಷ* ಹಸ್ತ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇದಕ್ಕೆ ಓಂಕಾರೋಪನಿಷತ್ : ಮಕಾರವೆಂಬ ಪ್ರಣವದಲ್ಲಿ - ``ದಂಡಶ್ಚ ತಾರಕಾಕಾರೋ ಭವತಿ ಓಂ ಸರ್ವಾತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ - ``ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಪರಾತ್ಪರಾತ್ಮೋ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ತ್ರಿಮಿಶಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಚತುರ್ವಿಂಶ ಪ್ರಣವಾಂಶಕೇ ||'' ಮಕಾರೇ ಚ ಅಕಾರೇ ಚ ಉಕಾರೇ ಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಪ್ರಥಮಂ ತಾರಕರೂಪಂ ದ್ವಿತೀಯಂ ದಂಡಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಶ್ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ*ಂ ಜ್ಯೋತಿಸ್ವರೂಪಕಂ | ಇತಿ ಪ್ರಣವಾ ವಿಜ್ಞೇಯಂ ಏತದ್ಗೌಪ್ಯಂ ವರಾನನೇ || ಓಂಕಾರಪ್ರಭವಾ ವೇದಾಃ ಓಂಕಾರ ಪ್ರಭವಾತ್ ಸ್ವರಾಃ | ಓಂಕಾರಪ್ರಭವಾ ಭೂಃ ಓಂಕಾರ ಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವೋ ಮಹಃ | ಓಂಕಾರ ಪ್ರಭವೋ ಜನಃ ಓಂಕಾರ ಪ್ರಭವೋ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರಪ್ರಭವೋ ರವಿಃ | ಓಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರಾನ್ಯತ್ರ ನ ಶೋಭಯೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವೋಹಿ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿಸರ್ವತ್ರ ಓಂಕಾರಂ ಗೌಪ್ಯಮಾನನಂ | ಇತಿ ಪ್ರಣವಂ ವಿಜ್ಞೇಯಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ- ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ ಪೂರ್ಣವಹಣದಿಂದೆಯುಂ `ಸರ್ವಂ ಖಲ್ವಿದಂ ಬ್ರಹ್ಮ'ವೆಂಬ ವಚನಾರ್ಥ ಸಾರ್ಥಕವಾಗಿಯಾ ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ, ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ ಅಕಾರೋಕಾರಮಕಾರಾಧಿದೇವತೆಗಳಾದ ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು- ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ ಸರ್ವವುಂ ಮೂರ್ತಿಬ್ರಹ್ಮವೆನಿಕುಂ. ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿತವಾದ ಹ ಎಂಬ ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ ತತ್ವಬ್ರಹ್ಮವೆನಿಕುಂ. ಬಳಿಕ್ಕಂ ಮಾಂಸ ಸಂಜ್ಞಿತವಾದ ಲಕಾರವೆ ಪೃಥ್ವೀಭೂತ ಬೀಜಂ. ಮೇದಸ್ಸಂಜ್ಞಿತವಾದ ವಕಾರವೆ ಜಲಭೂತ ಬೀಜಂ. ಷಷ* ್ಯ ಸಂಜ್ಞಿತವಾದ ರಕಾರವೆ ತೇಜೋಭೂತ ಬೀಜಂ. ಸಪ್ತಮಸಂಜ್ಞಿತವಾದ ಹಕಾರವೆ ಆಕಾಶಭೂತ ಬೀಜವೀ ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ. ಮರಲ್ದುಂ, ಪ್ರಕೃತಿಸಂಜ್ಞಿತವಾದ ಅ ಇ ಉ ಋ ಒ ಎ ಒಯೆಂಬೀ ಪ್ರಕೃತಿಗಳಲ್ಲಿ ಋ ಒ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ ಯೆಂಬೀಯೈದಕ್ಕರಮಂ ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ, ಬಿಂದುನಾದ ಸೌಂಜ್ಞಿತವಾದ ಸೊನ್ನೆಯೊಳ್ಬೆಸೆ, ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ ಬ್ರಹ್ಮಬೀಜಂಗಳೈದಂ ಪೇಳ್ದು, ಮತ್ತವಿೂ ಬೀಜಗಳೊಳ್ವಾಚಕವಾದ ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ- ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ ಪಂಚಬ್ರಹ್ಮಂಗಳಿವಕ್ಕೆ ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ ಚತುಥ್ರ್ಯಂತಮಂ ಪ್ರಯೋಗಿಸೆ ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ- ಓಂ ಹ್ರಂ ಸದ್ಯೋಜಾತಾಯ ನಮಃ ಓಂ ಹ್ರೀಂ ವಾಮದೇವಾಯ ನಮಃ ಓಂ ಹ್ರುಂ ಅಘೋರಾಯ ನಮಃ ಓಂ ಹ್ರೇಂ ತತ್ಪುರುಷಾಯ ನಮಃ ಓಂ ಹ್ರೌಂ ಈಶಾನಾಯ ನಮಃ ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ ಸಬಿಂದುವಾಗುಚ್ಚರಿಸೆ, ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ ಸ್ವರೂಪಮೆ ಪಿಂಡಬ್ರಹ್ಮವೆನಿಕುಂ. ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ ನಿರೂಪಣಾನಂತರದಲ್ಲಿಯಾ ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ- ಈಶಾನ ತತ್ಪುರುಷಾಘೋರ ವಾಮದೇವ ಸದ್ಯೋಜಾತಂಗಳಿವಕ್ಕೆ ವಿವರಂ ಈಶಾನಕ್ಕೆದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ. ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿರ್ಮೂಕಲೆ. ಸದ್ಯೋಜಾತಕ್ಕೆಂಟು ಕಲೆ. ಅಂತು, ಮೂವತ್ತೆಂಟು ಕಲೆ. ಇವಕ್ಕೆ ವಿವರಂ, ಮೊದಲೀಶಾನಕ್ಕೆ- `ಈಶಾನಸ್ಸರ್ವ ವಿದ್ಯಾನಾಂ' ಇದು ಮೊದಲ ಕಲೆ. `ಈಶಾನಾಸ್ಸರ್ವ ಭೂತಾನಾಂ' ಇದೆರಡನೆಯ ಕಲೆ. `ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ' ಇದು ಮೂರನೆಯ ಕಲೆ. `ಶಿವೋಮೇಸ್ತು' ಇದು ನಾಲ್ಕನೆಯ ಕಲೆ. `ಸದಾ ಶಿವೋಂ' ಇದು ಐದನೆಯ ಕಲೆ. ತತ್ಪುರುಷಕ್ಕೆ- `ತತ್ಪುರುಷಾಯ ವಿದ್ಮಹೆ' ಇದು ಮೊದಲ ಕಲೆ. `ಮಹಾದೇವಾಯ ಧೀಮಹಿತನ್ನೋ' ಇದೆರಡನೆಯ ಕಲೆ. `ರುದ್ರಃ' ಇದು ಮೂರನೆಯ ಕಲೆ. `ಪ್ರಚೋದಯಾತ್' ಇದು ನಾಲ್ಕನೆಯ ಕಲೆ. ಅಘೋರಕ್ಕೆ `ಅಘೋರೇಭ್ಯಃ' ಇದು ಮೊದಲ ಕಲೆ. `ಘೋರೇಭ್ಯಃ' ಇದು ಎರಡನೆಯ ಕಲೆ. `ಘೋರಘೋರ' ಇದು ಮೂರನೆಯ ಕಲೆ. `ತರೇಭ್ಯ' ಇದು ನಾಲ್ಕನೆಯ ಕಲೆ. `ಸರ್ವತಃ' ಇದೈದನೆಯ ಕಲೆ. `ಸರ್ವ' ಇದಾರನೆಯ ಕಲೆ. `ಸರ್ವೇಭ್ಯೇ ನಮಸ್ತೇಸ್ತು' ಇದೇಳನೆಯ ಕಲೆ. `ರುದ್ರ ರೂಪೇಭ್ಯಃ' ಇದೆಂಟನೆಯ ಕಲೆ. ವಾಮದೇವಕ್ಕೆ- `ವಾಮದೇವಾಯ' ಇದು ಮೊದಲ ಕಲೆ. `ಜೇಷಾ*ಯ' ಇದೆರಡನೆಯ ಕಲೆ. `ರುದ್ರಾಯ ನಮಃ' ಇದು ಮೂರನೆಯ ಕಲೆ. `ಕಲಾಯ' ಇದು ನಾಲ್ಕನೆಯ ಕಲೆ. `ಕಲಾ' ಇದೈದನೆಯ ಕಲೆ. `ವಿಕರಣಾಯ ನಮಃ' ಇದಾರನೆಯ ಕಲೆ. `ಬಲಂ' ಇದೇಳನೆಯ ಕಲೆ. `ವಿಕರಣಾಯ' ಇದೆಂಟನೆಯ ಕಲೆ. `ಬಲಂ' ಇದೊಂಬತ್ತನೆಯ ಕಲೆ. `ಪ್ರಮಥನಾಥಾಯ' ಇದು ಪತ್ತನೆಯ ಕಲೆ. `ಸರ್ವಭೂತ ದಮನಾಯ ನಮಃ' ಇದು ಪನ್ನೊಂದನೆಯ ಕಲೆ `ಮನ' ಇದು ಪನ್ನೆರಡನೆಯ ಕಲೆ. `ಉನ್ಮನಾಯ' ಇದು ಪದಿಮೂರನೆಯ ಕಲೆ. ಸದ್ಯೋಜಾತಕ್ಕೆ- `ಸದ್ಯೋಜಾತಂ ಪ್ರಪದ್ಯಾಮಿ' ಇದು ಮೊದಲ ಕಲೆ. `ಸದ್ಯೋಜಾತಾಯವೈ ನಮಃ' ಇದೆರಡನೆಯ ಕಲೆ. `ಭವೆ' ಇದು ಮೂರನೆಯ ಕಲೆ. `ಭವೇ' ಇದು ನಾಲ್ಕನೆಯ ಕಲೆ. `ನಾತಿಭವೆ' ಇದೈದನೆಯ ಕಲೆ. `ಭವಸ್ವ ಮಾಂ' ಇದಾರನೆಯ ಕಲೆ. `ಭವ' ಇದೇಳನೆಯ ಕಲೆ. `ಉದ್ಭವ' ಇದೆಂಟನೆಯ ಕಲೆ. ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂ, ಶಿವಾಂಗಮಂತ್ರ ನಿರೂಪಣಾನಂತರದಲ್ಲಿ, ಭೂತಾಂಗಮಂತ್ರಮಂ ಪೇಳ್ವೆನೆಂತೆನೆ- ಪೃಥ್ವೀಬೀಜವಾದ ಲಕಾರಮಂ ಜೀವಬೀಜವಾದ ಹಕಾರದೊಡನೆ ಕೂಡಿ ಅದನೆರಡನೆಯ ಸ್ವರದೊಡನೆ ಸಂಯೋಗಿಸಿದ ಬಿಂದು ನಾದ ಸಂಜ್ಞಿತನಾದ ಸೊನ್ನೆಯಂ ಬೆರಸೆ ಹ್ರಾಂ ಎಂದಾಯಿತ್ತು. ಶಿವಸಂಜ್ಞಿತವಾದ ಹಕಾರದೊಡನೆ ಜಲಬೀಜವಾದ ವಕಾರಮಂ ನಾಲ್ಕನೆಯ ಸ್ವರವಾದೀಕಾರದೊಡನೆ ಕೂಡಿ ಶಿವಶಕ್ತಿಸಂಜ್ಞಿತವಾದ ಸೊನ್ನೆಯಂ ಬೆರಸಿ ಹ್ರೀಂ ಎಂದಾಯಿತ್ತು. ಷಷ* ಸಂಜ್ಞಿತ ರಕಾರಮಂ ಪಂಚಮ ಸಂಜ್ಞಿತ ಹಕಾರದೊಳ್ಬೆರಸಿ ಸ್ಪರಪಂಚಮಾಂತವಾದೂಕಾರದೊಳಾ ಹಕಾರಮಂ ಕೂಡಿ ಯಾಧಾರಾಧೇಯಸಂಜ್ಞಿತ ಬಿಂದುವಿನೊಡವೆರಸೆ ಹ್ರೂಂ ಎಂದಾಯಿತ್ತು. ವಾಯುಬೀಜವಾದ ಯಕಾರದೊಡನೆ ಕೂಡಿದ ಭೂತಾಂತ ಸಂಜ್ಞಿತವಾದ ಹಕಾರಮಂ ಸ್ವರೈಕಾದಶಾಂತವಾದೈಕಾರದೊಡನೆ ಕೂಡಿಸಿ ಪರಾಪರ ಸಂಜ್ಞಿತವಾದ ಸೊನ್ನೆಯೊಳ್ಬೆರಸೆ ಹ್ರ್ಯೇಂ ಎಂದಾಯಿತ್ತು. ತತ್ವಾಂತ ಸಂಜ್ಞಿತವಾದ ಹಕಾರಮಂ ತತ್ವಾಂತವಾದ ದ್ವಯಕ್ಕರಮಂ ಕಲಾಸಂಜ್ಞಿತವಾದೌಕಾರದೊಡನೆ ಕೂಡಿಸಿ ಕಾರ್ಯಕಾರಣಸಂಜ್ಞಿತವಾದ ಸೊನ್ನೆಯೆಂ ಕೂಡಿಸೆ ಹ್ರೌಂ ಎಂದಾಯಿತ್ತು. ಶಕ್ತಿಸಂಜ್ಞಿತವಾದ ಸಕಾರದ ಕಡೆಯ ಹ್ ಎಂಬ ಹಕಾರಂ ಮತ್ತೆಯುಂ ಶಿವಸಂಜ್ಞಿತವಾದ ಹ್ ಎಂಬ ಹಕಾರಮಿವೆರಡರೊಳ್ ಮೊದಲ ಹ್‍ಕಾರಂ ಆದಿಬೀಜಸಂಜ್ಞಿತವಾದಕಾರದೊಡನೆ ಕೂಡಿ ಹಹ್ ಎಂದಾಯಿತ್ತಿ- ವೆರಡರ ಮದ್ಯದೊಳ್ಬಿಂದು ಬರೆ ಹಂಹ್ ಎಂದಾಯಿತ್ತು. ಇದು ಛೇದ್ಯಸಂಜ್ಞಿತವಾದಸ್ತ್ರಮಂತ್ರದೊಡನೆ ಕೂಡಿ ಐದು ಭೂತಗ್ರಂಥಿಯೊಡನೆ ಕೂಡಿಹ ಭೂತಾಂಗಬೀಜಮಾತ್ಮನಲ್ಲಿರುತ್ತಿಹುದೀ ತೆರದಿಂ ಹ್ರಾಂ ಹ್ರೀಂ ಹ್ರೂಂ ಹ್ರ್ಯೇಂ ಹ್ರೌಂ ಹಂಹ್ ಎಂದಾರು ಭೇದಮಾದ ಭೂತಾಂಗಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->