ಎನ್ನ ಷಡ್‍ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್‍ದ್ರಿಯಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್‍ಭಾವಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡೂರ್ಮೆಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ವರ್ಗಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಟ್‍ಕರಣಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಇದು ಕಾರಣ `ಓಂ ನಮಃಶಿವಾಯ' `ಓಂ ನಮಃಶಿವಾಯ'
`ಓಂ ನಮಃಶಿವಾಯ' ಎಂಬ ನಿಮ್ಮ ನಾಮಾಮೃತವನುಂಡು
ನಿತ್ಯಮುಕ್ತನಾದೆನಯ್ಯ ಅಖಂಡೇಶ್ವರಾ.