ಅಥವಾ

ಒಟ್ಟು 7 ಕಡೆಗಳಲ್ಲಿ , 2 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ ತಮ್ಮಂಗದ ಮೇಲಣ ಲಿಂಗವು ಷಟ್‍ಸ್ಥಾನಂಗಳಲ್ಲಿ ಬ್ಥಿನ್ನವಾದಡೆ ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ, ಮರಳಿ ಆ ಬ್ಥಿನ್ನವಾದ ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ತಾನು ಸಾಯಲಾರದೆ ಜೀವದಾಸೆಯಿಂದೆ ಆ ಬ್ಥಿನ್ನವಾದ ಲಿಂಗವ ಧರಿಸಿದಡೆ ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ ಪ್ರಾಪ್ತಿಯುಂಟಾದ ಕಾರಣ, ಇದಕ್ಕೆ ಸಾಕ್ಷಿ : ``ಶಿರೋ ಯೋನಿರ್ಗೋಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ | ಷಟ್‍ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ | ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||'' -ಸೂP್ಷ್ಞ್ಮ ಗಮ. ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ :ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷೆ*ಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದು ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ನಿನ್ನ ಚಿದಂಗದ ಷಟ್ಸ್ಥಾನಂಗಳಲ್ಲಿ ಎಪ್ಪತ್ತೈದು ತತ್ತ್ವಂಗಳು ಅಡಗಿರ್ಪವಯ್ಯ. ಚಿದ್ಘನಲಿಂಗದ ಷಟ್ಸ್ಥಾನಂಗಳಲ್ಲಿ ಹದಿನೆಂಟು ತತ್ತ್ವಂಗಳು ಅಡಗಿರ್ಪವಯ್ಯ. ಆ ಚಿದಂಗ ಚಿದ್ಘನಲಿಂಗದ ಮಧ್ಯದಲ್ಲಿ ಬೆಳಗುವ ಅಖಂಡ ಮಹಾಜ್ಯೋತಿಪ್ರಣಮದ ಷಟ್ಸ್ಥಾನಂಗಳಲ್ಲಿ ಅಷ್ಟವಿಧತತ್ವಂಗಳು ಅಡಗಿರ್ಪವಯ್ಯ. ಆ ತತ್ವÀಂಗಳ ವಿಭಾಗೆಯೆಂತೆಂದಡೆ: ಪೃಥ್ವೀತತ್ತ್ವ ಇಪ್ಪತ್ತೈದು, ಅಪ್ಪುತತ್ತ್ವ ಇಪ್ಪತ್ತು, ಅಗ್ನಿತತ್ತ್ವ ಹದಿನೈದು, ವಾಯುತತ್ವ ಹತ್ತು, ಆಕಾಶತತ್ತ್ವ ಐದು. ಇಂತು ಎಪ್ಪತ್ತೈದು ತತ್ತ್ವಂಗಳು ಆತ್ಮತತ್ವ ಒಂದರಲ್ಲಿ ಅಡಗಿ, ಇಂಥ ಅನಂತ ಅನಂತ ಆತ್ಮರು ಔದುಂಬರ ವೃಕ್ಷಕ್ಕೆ ಫಲ ತೊಂತಿದೋಪಾದಿಯಲ್ಲಿ ಆ ಚಿದಂಗಕ್ಕೆ ಅನಂತ ಆತ್ಮತತ್ತ್ವಂಗಳು ತೊಂತಿಕೊಂಡಿರ್ಪವು ನೋಡ. ಅಂಥ ಚಿದಂಗ ಹದಿನೆಂಟು ಪ್ರಣಮರೂಪಿನಿಂದ ಚಿದ್ಘನಲಿಂಗವನಾಶ್ರೈಸಿರ್ಪುದು ನೋಡ. ಆ ಚಿದ್ಘನಲಿಂಗವು ಅಷ್ಟವಿಧಸಕೀಲಂಗಳಿಂದ ಅಖಂಡ ಮಹಾಜ್ಯೋತಿಪ್ರಣಮವನಾಶ್ರೈಸಿರ್ಪುದು ನೋಡ. ಇಂತು ನೂರೊಂದು ಸಕೀಲಂಗಳ ತತ್ವರೂಪಿನಿಂದ ತಿಳಿದು ಅಂತು ಅಂಗಲಿಂಗಸಂಗದಲ್ಲಿ ಅಡಗಿರುವ ನೂರೊಂದುತತ್ವ ಸಕೀಲಂಗಳ ನೂರೊಂದುಸ್ಥಲದಲ್ಲಿ ನೆಲೆಗೊಳಿಸಿ ಪರತತ್ವ ಲಿಂಗಲೀಲೆಯಿಂದ ನಿಂದ ನಿಲುಕಡೆಯ ಅನುಗ್ರಹದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಸ್ವತಂತ್ರಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಘನಮಹಾ ಇಷ್ಟಲಿಂಗವೆ ನಿನ್ನ ನಾದ-ಬಿಂದು-ಕಳೆಗಳಿಗೆ ಚೈತನ್ಯಸ್ವರೂಪು ನೋಡ. ಈ ಲಿಂಗದ ವೃತ್ತದಲ್ಲಿ ಸಕಲಲೋಕಂಗಳು, ಸಕಲಮನುಗಳು ಅಡಗಿರ್ಪವು ನೋಡ. ಈ ಲಿಂಗವೆ ನಿನ್ನ ಹರಕಿರಣ ಚೈತನ್ಯಸ್ವರೂಪು ನೋಡ. ಈ ಲಿಂಗವೆ ನಿನ್ನ ಸಂಜೀವನಕಾಮಧೇನು-ಕಲ್ಪವೃಕ್ಷ ನೋಡ. ಇಂತು ನಿನ್ನ ಕರಸ್ಥಲದಲ್ಲಿ ರಾಜಿಸುವ ಪರಶಿವಲಿಂಗದೇವಂಗೆ ಜಂಗಮದ ಪಾದೋದಕ ಪ್ರಸಾದವೆ ಪರಮಚಿದೈಶ್ವರ್ಯ ನೋಡ. ಇಂತು ಜಂಗಮಕ್ಕೆ ಭೃತ್ಯಾಚಾರಮೂರ್ತಿಲಿಂಗದೇವನ ಒಕ್ಕು ಮಿಕ್ಕ ಕರುಣಜಲ ಕರುಣಪ್ರಸಾದವೆ ನಿನಗರ್ಪಿತವಯ್ಯ. ನಿನ್ನ ಪರಿಣಾಮ ಸಂತೋಷವೆ ಲಿಂಗಾರ್ಪಿತವಯ್ಯ. ಇಂತಪ್ಪ ಲಿಂಗದೇವನ ನಿನ್ನ ಷಟ್ಸ್ಥಾನಂಗಳಲ್ಲಿ ಧರಿಸಿ, ಲಿಂಗವೆ ನಿನಗೆ ಪ್ರಾಣವಾಗಿ, ನೀನೆ ಲಿಂಗಕ್ಕೆ ಪ್ರಾಣವಾಗಿ, ಸತ್ಯದಿಂದ ಬಂದ ಪದಾರ್ಥವ ದಾಸೋಹಂ ಭಾವದಿಂದ ಸಮುದ್ರದುದಕವ ಸಮುದ್ರಕ್ಕೆ ಅರ್ಪಿಸಿದಂತೆ, ಧಾನ್ಯದ ರಾಶಿಯ ಒಳಗಣ ಧಾನ್ಯದ ತಂದು ಪಾಕವಮಾಡಿ ಮತ್ತಾ ರಾಶಿಗೆ ಅರ್ಪಿಸಿದಂತೆ, ಆ ಲಿಂಗಜಂಗಮದ ಪಾದೋದಕ ಪ್ರಸಾದವ ಮತ್ತಾ ಲಿಂಗಜಂಗಮಕ್ಕೆ ಸಮರ್ಪಿಸಿ, ಆ ಲಿಂಗಜಂಗಮದ ಪರಿಣಾಮ ಮಹಾಪ್ರಸಾದದಲ್ಲಿ ನಿತ್ಯ ಸಂತೃಪ್ತನಾಗಿರುವಂಥಾದೆ ಲಿಂಗಸ್ವಾಯತದೀಕ್ಷೆ. ಇಂತುಟೆಂದು ಶ್ರೀ ಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು ಶುದ್ಧಸಾವಧಾನದಿಂದೆ ಧರಿಸಿಕೊಂಡು, ಆ ಲಿಂಗವೆ ಪತಿ ತಾನೆ ಸತಿ ಎಂಬ ಭಾವದಿಂದೆ ಆಚರಿಸುವ ಕಾಲದಲ್ಲಿ ಆ ಲಿಂಗವು ಮೋಸದಿಂದೋಸರಿಸಿ ಹೋದಡೆ ಅರಸಿ ನೋಡಿಕೊಂಡು, ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರವ ತಿಳಿದು ಮುನ್ನಿನಂತೆ ಧರಿಸಿಕೊಂಬುವುದು. ಮತ್ತಾ ಲಿಂಗವು ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕ ಎಂಬ ಷಟ್‍ಸ್ಥಾನಂಗಳಲ್ಲಿ ಭಿನ್ನವಾದಡೆಯೂ ಕಣ್ಣಿಗೆ ಕಾಣಿಸಿಕೊಳ್ಳದೆ ಹೋದಡೆಯೂ ಲಿಂಗಕ್ಕೆ ತನ್ನ ಪ್ರಾಣವನು ತ್ಯಾಗಮಾಡಬೇಕಲ್ಲದೆ, ಅಲ್ಲಿ ಹಿಂದು ಮುಂದು ನೋಡಲಾಗದು. ಇದಕ್ಕೆ ಶಿವನ ವಾಕ್ಯವೆ ಸಾಕ್ಷಿ : ``ಗುರುಣಾ ದತ್ತಲಿಂಗಂ ತು ಸಾವಧಾನೇನ ಧಾರಯೇತ್ | ಪ್ರಮಾದಾತ್ಪತಿತೇ ಲಿಂಗೇ ಪ್ರಾಣಾನಪಿ ಪರಿತ್ಯಜೇತ್ || ವೃತ್ತನಾಲಸಮಂ ಪೀಠಂ ಗೋಲಕಂ ಮಧ್ಯಗೋಮುಖಂ | ಭಿನ್ನಂ ಷಡ್ವಿಧಸ್ಥಾನೇನ ಪ್ರಾಣಾಂ ಸ್ತ್ಯಕ್ತ್ವಾ ಶಿವಂ ವ್ರಜೇತ್ ||'' -ಸಿದ್ಧಾಂತ ಶಿಖಾಮಣಿ ಇಂತಪ್ಪ ಲಿಂಗೈಕ್ಯವಾದ ಶರಣರ ನೀನೆಂದೇ ಕಾಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->