ಅಥವಾ

ಒಟ್ಟು 48 ಕಡೆಗಳಲ್ಲಿ , 3 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ನ ವಿಶೇಷ ಮಣ್ಣು ಅಧಮವೆಂದಡೆ, ಅದು ನಿಂದು ಕರಗುವುದಕ್ಕೆ ಮಣ್ಣಿನ ಕೋವೆಯೆ ಮನೆಯಾಯಿತ್ತು. ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು. ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು. ಮರದೊಳಗಣ ಕಿಚ್ಚು ಮರನನೂ ಸುಟ್ಚು, ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು. ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು, ನಿಲಿಸಿ ತೋರಿ, ಮುನ್ನಿನಂತಾಯಿತ್ತು. ಅಪ್ಪು ಸಂಗವನೆಯ್ದಿದಂತೆ ಇರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಾಲವಿರಹಿತ ಗುರುವಾಗಬೇಕು. ಕರ್ಮವಿರಹಿತ ಲಿಂಗವಾಗಬೇಕು. ಭವವಿರಹಿತ ಜಂಗಮವಾಗಬೇಕು. ಮೂರನರಿತು bs್ಞೀದಿಸಿ, ವಿರಕ್ತನಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ, ವಾಳುಕ ಸಂಬಂದ್ಥಿಯಾದ ಜಲದ ಇರವಿನಂತೆ, ಶಿಲೆ ತೈಲದ ಒಲುಮೆಯಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು. ವ್ರತ ನೇಮ ಕೃತ್ಯ ನಿತ್ಯವ ಮಾಡುವಲ್ಲಿ, ಅತಿಶಯನಾಗಿರಬೇಕು. ಪಟುಭಟನಾದಲ್ಲಿ ಉಭಯದಳ ಪಿತಾಮಹನಾಗಿರಬೇಕು. ಗತಿ ಬಟ್ಟೆಯ ತೋರುವ ಚರಗುರುದ್ವಯ ಗತಿಮಹನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮನ ಮುಟ್ಟದ ಪೂಜೆ, ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ. ವಸ್ತುವ ಮುಟ್ಟದ ಅರ್ಪಿತ, ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ, ಇದು ನಿಶ್ಚಯದ ಮುಟ್ಟಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕಾಳಿಕೆ ಹರಿದ ಹೇಮದಂತೆ, ನಾರಿಕೇಳಫಲವ ನುಂಗಿದ ವಾರಣದಂತೆ, ಬೆರಸಿ ಬೆರಸದಂತಿರಬೇಕು. ಅದು ನಾಲಿಗೆಯ ಹುಣ್ಣಿನಂತೆ, ಮೀರಬಾರದು, ಅಂಗೀಕರಿಸಬಾರದು. ಕ್ರೀಜ್ಞಾನಸಂಪದದಲ್ಲಿ ಕಾಬವಂಗೆ ಭಾವಶುದ್ಧವಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ ವಿರೋಧವುಂಟೆ ಅಯ್ಯಾ ? ಕ್ರೀ ಹೊರಗಾಗಿ ಆತ್ಮನೊಳಗಾದಲ್ಲಿ, ನಾನೆಂಬನ್ನಕ್ಕ ಕ್ರೀ ಶೂನ್ಯವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು. ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ. ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ, ಪರಿಪೂರ್ಣ ತಾನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕುಟಿಲಕ್ಕಲ್ಲದೆ ಜಗ ಸಿಕ್ಕದು. ವಾಚಕಂಗಲ್ಲದೆ ಭೋಗವಿಲ್ಲ. ಘಟಧರ್ಮಕ್ಕೆ ಹೊರಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು. ಸಸಿಯಿಲ್ಲದ ಫಲವುಂಟೆ ಅಯ್ಯಾ ? ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ ಗೊತ್ತಾವುದು ಹೇಳಯ್ಯಾ ? ಅದು ಮುಟ್ಟಿದ ಮುಟ್ಟಿನಲ್ಲಿ ಒದಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇದ್ಥಿಸಿದಂತಿರಬೇಕು. ಆ ಚರಪರ ಒಡಗೂಡಿದಂತಿರಬೇಕು. ಜಲ ಜಲವ ಕೂಡಿದಂತೆ ಹೆರೆಹಿಂಗುವುದಕ್ಕೊಡಲಿಲ್ಲ. ವಾರಿಯ ಶಿಲೆ ಬಲಿದು ನೋಡ ನೋಡ ನೀರಾದಂತಿರಬೇಕು. ಇಷ್ಟಲಿಂಗಸಂಬಂಧದ ನಿಷ್ಠೆ, ಪ್ರಾಣಕೂಟ ಉಭಯ ಮೋಸವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಗರ್ಭದಲ್ಲಿ ಶಿಶು ಬಲಿದು, ಹಸಿದೆನೆಂದು ಅತ್ತುದುಂಟೆ ಅಯ್ಯಾ ? ಬೆಸನಾಗಿ ಪ್ರತಿರೂಪಿಂಗೆ ಕುಚಕ್ಷೀರವಲ್ಲದೆ ಘಟದಿಂದಡಗಿದಲ್ಲಿ, ಸುಖ ತಾಯ ಇರವಿನಲ್ಲಿ ನಿಂದಂತೆ, ಉಭಯಭೇದ, ಇಷ್ಟಲಿಂಗಸಂಬಂಧಯೋಗ. ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದಿರಿಟ್ಟ ಭೇದ.
--------------
ಮೆರೆಮಿಂಡಯ್ಯ
ಇನ್ನಷ್ಟು ... -->