Some error occurred
ಅಥವಾ

ಒಟ್ಟು 10 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Created with Highcharts 3.0.6Chart context menuಪದವಿರುವ ವಚನಗಳುವಚನಕಾರರು1132ಒಟ್ಟು10ಅಕ್ಕಮಹಾದೇವಿ30ತೋಂಟದಸಿದ್ಧಲಿಂಗಶಿವಯೋಗಿಗಳು 5ಸಿದ್ಧರಾಮೇಶ್ವರ42ಸ್ವತಂತ್ರಸಿದ್ಧಲಿಂಗ 024
ಸೂರ್ಯನ ಕರಜಾಲಂಗಳು ಸೂರ್ಯೋದಯವಾದಲ್ಲಿ ಹುಟ್ಟಿ, ಸೂರ್ಯನು ಅಸ್ತಮಿಸಲು ಕೂಡ ಅಡಗುವಂತೆ, ಮನೋವಿಕಾರದಿಂದ ಲೋಕವೆಲ್ಲವೂ ತೋರಿ, ಮನ ಲಯವಾದೊಡನೆ ಆ ಲೋಕವೆಲ್ಲವೂ ಅಡಗಿ, ಜ್ಞಾನತತ್ತ್ವವೊಂದೇ ತನ್ನ ಸ್ವರೂಪವಾಗಿ ಉಳಿದಿಹ ಯೋಗಿಗೆ ಮುಂದೆ ಅರಿಯಬೇಕಾದುದೊಂದೂ ಇಲ್ಲವಯ್ಯಾ. ಉಳಿದ ಉಳುಮೆ ಜ್ಞಾನರೂಪಾಗಿ ನಿಂದಿತಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೇ.
--------------
ಸ್ವತಂತ್ರ ಸಿದ್ಧಲಿಂಗ
ಆಂದೋಲನದಲ್ಲಿಹ ರಾಜಶಿಶುವಿನಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಸಂಧ್ಯಾಕಾಲದಲ್ಲಿಹ ಪ್ರಕಾಶದಂತೆ ವಿಷಯಸುಖವಿರಬಲ್ಲಡೆ, ಅದು ಯೋಗಿಗೆ ಭೂಷಣ. ವಾರಾಂಗನೆಯಲ್ಲಿಹ ಪ್ರ್ಕೀಯಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಪತಿವ್ರತೆಯಲ್ಲಿಹ ಭಕ್ತಿಯಂತಿರಬಲ್ಲಡೆ ಅದು ಯೋಗಿಗೆ ಭೂಷಣ. ಕಪಿಲಸಿದ್ಧಮಲ್ಲಿಕಾರ್ಜುನಂಗದು ಬಹು ತೋಷಣ ಕೇಳಾ, ಮನವೆ.
--------------
ಸಿದ್ಧರಾಮೇಶ್ವರ
ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ, ತುರ್ಯ ತುರ್ಯಾತೀತ ಸಹಜಾವಸ್ಥೆ ಎಂಬ ಮೂರು ಕೂಡಿ ಯೋಗಿಸುವ ಯೋಗಿಗೆ, ಸಾಲಂಬ ನಿರಾಲಂಬದೊಳಗೆ ಅಡಗಿ ಆ ನಿರಾಲಾಂಬದ ನಿಶ್ಚಿಂತ ನಿವಾಸದಲ್ಲಿ ಆತ್ಮ ಪರಮಾತ್ಮರೊಂದಾದ ಬಳಿಕ ಅನಂತ ಸಚರಾಚರ ಒಂದು ಕಿಂಚಿತ್ತು. ಚತುರ್ಮುಖ ಇಂದ್ರ ವಿಷ್ಣುವೆಂಬವರ ಪದ ಒಂದು ಕಿಂಚಿತ್ತು. ಇನ್ನುಳಿದವರ ಹೇಳಲಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ ಹಿರಿದೊಂದಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಯೋಗಿಗೆ ಕೋಪವೆ ಮಾಯೆ; ರೋಗಿಗೆ ಅಪಥ್ಯವೆ ಮಾಯೆ; ಜ್ಞಾನಿಗೆ ಮಿಥ್ಯವೆ ಮಾಯೆ; ಅರಿದೆನೆಂಬವಂಗೆ ನಾನು ನೀನೆಂಬುದೆ ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಬ್ಬರುತ್ತಮರೆಂಬರು. ಒಬ್ಬರು ಮಧ್ಯಮರೆಂಬರು. ಒಬ್ಬರು ಕನಿಷ*ರೆಂಬರು. ಒಬ್ಬರಧಮರೆಂಬರು. ಒಬ್ಬರು ಕಷ್ಟ ನಿಷೂ*ರಿಗಳೆಂಬರು. ಎಂದರದಕೇನು ಯೋಗಿಗೆ ವಿನಯ ಕಂಟಕವಲ್ಲದೆ. ಲೋಕಾರ್ಥಕ್ಕೂ ಪರಮಾರ್ಥಕ್ಕೂ ವಿರುದ್ಧ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಸವಣಂಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ, ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.
--------------
ಅಕ್ಕಮಹಾದೇವಿ
ಅಂಗವ ಧರಿಸಿದ ಯೋಗಿಗೆ ಅಂಗನೆಯರು ಂಗದ ರಾಣಿವಾಸ. ಅಂಗವ ಧರಿಸಿದ ಭೋಗಿಗೆ ಕಾಷಾಯಾಂಬರಧಾರಿಗಳು ರುದ್ರಗಣಂಗಳು. ಅಂಗವ ಧರಿಸಿದ ಜೀವಜಾಲವು ಕಪಿಲಸಿದ್ಧ ಮ್ಲಕಾರ್ಜುನನೆಂದು ನಂಬಿದೆ ನೋಡಾ, ಗುರುವೆ ಚೆನ್ನಬಸವಣ್ಣ£
--------------
ಸಿದ್ಧರಾಮೇಶ್ವರ
-->
Some error occurred