ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ ಶಿವನ ನಿಜವು ಸಾಧ್ಯವಾಗದು. ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
--------------
ಅಲ್ಲಮಪ್ರಭುದೇವರು
ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ, ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯ, ತನುವಿನ ಮಂಟಪದ ಘನ ಮಸ್ತಕದಲಿಪ್ಪ ಹೊಂಗಳಸದಾ ಮೂರು ಮತ್ತೊಂದಾಗಿ ಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿ ಮೀರಿನಿಂದಾ ತ್ವಮಸಿ ಕಪಿಲಸಿದ್ಧಮಲ್ಲಿನಾಥನ ಸಾರಹೃದಯನ ಭಕ್ತಿ ಫಲವಿಂತುಟು.
--------------
ಸಿದ್ಧರಾಮೇಶ್ವರ
ಮುನ್ನಾಥ ಫಲವನೂ ಇನ್ನು ಸೀಮೆಕ್ಷೇತ್ರದ ಭಕ್ತಿ ಮುನ್ನಿನಂತೆ ಫಲವಾಯಿತೊ ಅಯ್ಯ, ಅಂದಾಯಲ್ಲಿ ಬಸವಣ್ಣ ತಂದಾನು ಹಿಂದು ಮುಂದುಗೆಟ್ಟ ಫಲವಾ ಫಲವೂ ಆ ಫಲವಾದರೆ ಸಫಲವಾಯಿತು ಸದ್ಭಕ್ತಿ ಒಲವಿಂಗೆ ನೀ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->