ಅಥವಾ

ಒಟ್ಟು 9 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ ಫಲವಿಲ್ಲದ ಹಣ್ಣಿನ ರುಚಿಯ ತಲೆಯೆ ಬಾಯಾಗುಣಬಲ್ಲರೆ, ನೆಲ ಬೆಂದಿತ್ತು, ತಲೆ ಸತ್ತಿತ್ತು. ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ ಎಂದು ಹೇಳಿದರಮ್ಮಾ ಎನ್ನ ಒಡೆಯರು. ಫಲವಿಲ್ಲದ ಕಂದನಿರ್ಪನವಳಿಗೆ, ಎನಗೆ ಫಲವಿಲ್ಲ, ಕಂದನಿಲ್ಲ. ಇದೇನೋ ದುಃಖದಂದುಗ ಗಂಗಾಪ್ರಿಯ ಕೂಡಲಸಂಗಮದೇವಾ ?
--------------
ಗಂಗಾಂಬಿಕೆ
ಆಯಿತ್ತಾಯಿತ್ತು ಫಲವಿಲ್ಲದ ವೃಕ್ಷ; ಆಯಿತ್ತಾಯಿತ್ತು ಪದವಿಲ್ಲದ ಫಲ; ಆಯಿತ್ತಾಯಿತ್ತು ಸೀಮೆಯ ಮೀರಿದ ಸಂಬಂಧ; ಆಯಿತ್ತಾಯಿತ್ತು ಅನ್ವಯದಲ್ಲಿ ಆಂದೋಳ; ಆಯಿತ್ತಾಯಿತ್ತು ನಿತ್ಯದಲ್ಲಿ ಭಕ್ತಿ ; ಆಯಿತ್ತಾಯಿತ್ತು ಭಕ್ತಿಯಲ್ಲಿ ವೈರಾಗ್ಯ; ಆಯಿತ್ತಾಯಿತ್ತು ವೈರಾಗ್ಯದಲ್ಲಿ ಅನುಗುಣ; ಆಯಿತ್ತಾಯಿತ್ತು ಸ್ವಾನುಭಾವ, ಸ್ವಾನುಭಾವದಲ್ಲಿ ಸಕಲ ಭಕ್ತಿ, ಸಕಲ ಭಕ್ತಿಯಿಂದ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಂಯೋಗ ಬಸವಣ್ಣಂಗೆ.
--------------
ಸಿದ್ಧರಾಮೇಶ್ವರ
ಆಯಿತ್ತಾಯಿತ್ತು ಫಲವಿಲ್ಲದ ವೃಕ್ಷ, ಆಯಿತ್ತಾಯಿತ್ತು ಪದವಿಲ್ಲದ ಫಲ, ಆಯಿತ್ತಾಯಿತ್ತು ಸೀಮೆಯ ಮೀರಿದ ಸಂಬಂಧ, ಆಯಿತ್ತಾಯಿತ್ತು ಅನ್ವಯದಲ್ಲಿ ಆಂದೋಳ, ಆಯಿತ್ತಾಯಿತ್ತು ನಿತ್ಯದ್ಲ ಭಕ್ತಿ, ಆಯಿತ್ತಾಯಿತ್ತು ಭಕ್ತಿಯಲ್ಲಿ ವೈರಾಗ್ಯ ಆಯಿತ್ತಾಯಿತ್ತು ವೈರಾಗ್ಯದಲ್ಲಿ ಅನುಗುಣ, ಆಯಿತ್ತಾಯಿತ್ತು ಅನುಗುಣದಲ್ಲಿ ಸ್ವಾನುಭಾವದ ಸಕಲಭಕ್ತಿ. ಸಕಲಭಕ್ತಿಯಿಂದ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ಸಂಯೋಗ ಬಸವಣ್ಣಂಗೆ
--------------
ಸಿದ್ಧರಾಮೇಶ್ವರ
ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ, ಅಲ್ಲಿ ಶಿವನಿಲ್ಲ, ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹೆಡೆಯಿಲ್ಲದ ಸರ್ಪ, ಫಲವಿಲ್ಲದ ವೃಕ್ಷ, ದಯವಿಲ್ಲದ ಮಾಟ, ಇಷ್ಟದ ದೃಷ್ಟವ ಕಾಣದ ಚಿತ್ತ, ಆತ್ಮನಲ್ಲಿ ಕಟ್ಟುವಡೆಯಬಲ್ಲುದೆ ? ಕ್ರೀಯಲ್ಲಿ ಆಚರಣೆ, ಆಚರಣೆಯಲ್ಲಿ ಅರಿವು ಶುದ್ಭವಾಗಿ ನಿಂದುದು, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಸೆ ಮಾಡದಿರು ಪರರಿಗೆ ಕೇಳು ಮನವೆ ದೋಷರಹಿತಲಿಂಗವಲ್ಲದನ್ಯರಿಗೆ ದಯವೆಂದು. ಪದ : ಜಲವಿಲ್ಲದ ಕೆರೆಗೆ ತುರು ಬಂದು ಹಿಂದಿರುಗುವಂತೆ ಫಲವಿಲ್ಲದ ಮರಕೆ ಗಿಣಿವಿಂಡು ಮುಸುಕಿದಂತೆ ನಳಿನವಿಲ್ಲದ ಕೊಳಕೆರಗಿದಳಿಚರದಂತೆ ಮಲಹರನ ಭಕ್ತಿಜ್ಞಾನವೈರಾಗ್ಯವಿಲ್ಲದವರಿಗೆ | 1 | ಕಾಮಧೇನಲ್ಲದೆ ಸಾದಾಧರೆಯ ಗೋವುಗಳು [ಪಂ ಚಾಮೃತವನೀಯಬಲ್ಲುದೆ ? ಕಲ್ಪವೃಕ್ಷವಲ್ಲದೆ ಬೇವು ಸ್ವಾ ದು ಫಲವನೀವುದೇ? ***]ಪಡುವುದೆ ಕಾಮಾರಿಲಿಂಗವಲ್ಲದನ್ಯರಿಗೆ ದಯವೆಂದು | 2 | ಕರಸೆರೆಯಲ್ಲಿ ಹಣ್ಣಿರೆ ಮರನೇರಿ ಕೊಯ್ಯುವರುಂಟೇ ? ಪರುಷ ಮನೆಯೊಳಿರೆ ಪರರ ಹಣವ ಬೇಡಲುಂಟೇ ? ಪರಬ್ರಹ್ಮ ಮೂಲವೃಕ್ಷ ಶರೀರದೊಳಿರೆ ಲೋಕ ನರರನಾಸೆಗೈವೆನೆಂಬ ಭ್ರಾಂತಿಯಾಕೆ ಮನುಜ ? | 3 | ದಧಿಯ ಮಥನವ ಮಾಡೆ ಪಂಚಾಮೃತವ ಕುಡುವುದು ಉದಕವ ಕಡೆಯಲೇನ ಕೊಡುವುದಾ ತೆರದಲ್ಲಿ ಸುಧಾಕರ ರತ್ನಲಿಂಗ ನಿನ್ನಿದಿರಿನಲ್ಲಿರುತಿರೆ ಅಧಮರಾದನ್ಯರಿಗೆ ಆಸೆಗೈಯಲಿಬೇಡ. | 4 | ಸರ್ವರ ಮನಧರ್ಮವನರಿವ ಪರಮಾತ್ಮ ನಿನ್ನ ಕರದೊಳಿರೆ ಅನ್ಯಸಂಗವ ಮಾಣಿಸಿ ಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದು ನಿಶ್ಚಿಂತನಾಗಿರು ಕಂಡ್ಯ ಮನವೆ. | 5 |
--------------
ಹೇಮಗಲ್ಲ ಹಂಪ
ಪಂಚಶತಕೋಟಿ ಯೋಜನದಾಚೇಲಿ ನೆಲವಿಲ್ಲದ ಭೂಮಿಯ ಕಂಡೆ. ಆ ಭೂಮಿಯಲ್ಲಿ ನೀರಿಲ್ಲದೆ ಒಂದು ವೃಕ್ಷ ಪುಟ್ಟಿ ಬೇರಿಲ್ಲದೆ ಬೆಳೆವುದ ಕಂಡೆ. ಶಾಖೆ ಪರ್ಣ ಮೊಗ್ಗೆಯಿಲ್ಲದೆ ಕುಸುಮ ತೋರುವುದ ಕಂಡೆ. ಫಲವಿಲ್ಲದ ಹಣ್ಣು ರಸಪೂರಿತವಾಗಿ ವೃಕ್ಷದ ಕೊನೆಯಲ್ಲಿರುವುದ ಕಂಡೆ. ಆ ಹಣ್ಣಿಗೆ ಹಲವರು ಹವಣಿಸಿ ಕಾಣದೆ ಹಿಂದಕ್ಕೆ ಬಿದ್ದುದ ಕಂಡೆ. ಆ ಹಣ್ಣನು ಕೈಕಾಲು ಕಣ್ಣು ತಲೆಯಿಲ್ಲದ ಅಧಮನು ಸೇವಿಸಿ ಸತ್ತುದ ಕಂಡೆ. ಸತ್ತ ಸುದ್ದಿಯ ಕೇಳಿ ಸತ್ತರು ನಿಮ್ಮವರು. ಸಾಯದೆ ಬದುಕಿದರು ಎಮ್ಮಡಿಯ ಮಕ್ಕಳು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ, ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ, ಫಲವಿಲ್ಲದ ವೃಕ್ಷದ ಹೂವ ಕಂಡು, ವಿಹಂಗಕುಲ ಚರಿಸದೆ ಮಚ್ಚಿದಂತೆ, ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು, ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.
--------------
ವೀರ ಗೊಲ್ಲಾಳ/ಕಾಟಕೋಟ
-->