ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ. ಅದರಂಕುರ ಮೂರು, ಫಲವಿಪ್ಪತ್ತೆ ೈದು ನೋಡಾ. ಪ್ರಥಮಾಂಕುರ ಶಿವ, ದ್ವಿತೀಯಾಂಕುರ ಸದಾಶಿವ, ಮೂರನೆ ಅಂಕುರ ಮಹೇಶ್ವರ. ಫಲವಿಪ್ಪತ್ತೆ ೈದು, ಪಂಚವಿಂಶತಿ ಲೀಲಾವಿಗ್ರಹ ನೋಡಾ. ಫಲವಿಪ್ಪತ್ತೆ ೈದು, ಅಂಕುರ ಮೂರನೊಳಕೊಂಡು ನಿಂದ ನಿರ್ವಯಲ ಪ್ರಾಣಲಿಂಗವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->