ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರುಳಿಯ ಹಣಿದವನಾರಾದಡೆಯೂ ಆಡರೆ ನಾರುಳಿದಡೆ ಮುಂದೆ ಅಂಕುರಿತ ಫಲ ತಪ್ಪದು. ಮಾಡುವನ್ನಕ್ಕ ಫಲದಾಯಕ ! ಮಾಟವರತು ನಿಮ್ಮಲ್ಲಿ ಸಯವಾದಡೆ ಆತನೆ ಅಚ್ಚ ಶರಣನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತನ ಮಠಕ್ಕೆ ಜಂಗಮ ಬಂದು, ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು, ಕ್ಷಮಿಸಬಲ್ಲಡೆ ಜಂಗಮ; ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ. ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ: ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ. ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ; ಬಂದ ಜಂಗಮದ ಇಂಗಿತಾಕಾರವರಿದು ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತನೆಂಬೆನು; ಬೇಡದ ಮುನ್ನವೆ ಮಾಡುವ ಭಕ್ತನು, ಬೇಡದೆ ಮಾಡಿಸಿಕೊಂಬ ಜಂಗಮವು, ಇಂತೀ ಎರಡರ ಸಮ್ಮೇಳ ಸನ್ನಿಧಿಯಲ್ಲಿರ್ದು ನಾನು ಸುಖಿಯಾದೆನು ಕಾಣಾ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಶರಣನ ಸರ್ವಾಂಗವು ಲಿಂಗದಂಗವು. ಶರಣ ನಡೆವ ಗತಿ ಲಿಂಗದ ಗತಿ. ಶರಣ ನುಡಿದ ನುಡಿ ಲಿಂಗದ ನುಡಿ. ಶರಣನಿದ್ದ ಸ್ವಭಾವದಿರವೆ ಲಿಂಗದಿರವು. ಶರಣನಿದ್ದ ತೋರುವ ಜಾಗ್ರತ್ ಸ್ವಪ್ನಂಗಳೆಲ್ಲ ಲಿಂಗವಿಡಿದು ತೋರುವುವು. ಇದು ಕಾರಣ, ಜ್ಞಾನಿಯಲ್ಲಿ ತೋರುವ ಕ್ರಿಯೆಗಳು ಫಲದಾಯಕ ಕ್ರಿಯೆಗಳಲ್ಲ. ಅದೆಂತೆಂದಡೆ, ಘೃತ ಸೋಂಕಿದ ರಸನೆಗೆ ಘೃತ ಲೇಪವಿಲ್ಲದಂತೆ, ಶರಣಂಗೆ ಕರ್ಮಲೇಪವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಸ್ವತಂತ್ರ.
--------------
ಸ್ವತಂತ್ರ ಸಿದ್ಧಲಿಂಗ
ಮೂರಾಧಾರ ಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು ಆವಲ್ಲಿ ಮನ ಸಹಿತ ಲಯವಾದವೊ ಆ ಲಯ ಕಾರಣವಾದುದು ಪ್ರಾಣಲಿಂಗ. ಆ ಪ್ರಾಣಲಿಂಗದ ನೆಲೆಯನರಿಯದೆ ಏನ ಮಾಡಿದಡೂ ಫಲದಾಯಕ ಭಕ್ತಿಯಲ್ಲದೆ ಮುಕ್ತಿಯಿಲ್ಲ. ಇದು ಕಾರಣ. ಪ್ರಾಣಲಿಂಗವನರಿದು, ಮನ ಶಕ್ತಿ ಸಂಯೋಗವ ಮಾಡಿ ಮುಕ್ತರಹುದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪೂಜಿಸುವನ್ನಕ್ಕ ಫಲದಾಯಕ ಕಂಡಾ, ಸಹಜಸಂಬಂಧದನುವು ಹುಟ್ಟದನ್ನಕ್ಕ ಎರವೆಂದೆನಿಸೂದು.
--------------
ಚನ್ನಬಸವಣ್ಣ
ಅಂಗದಲ್ಲಿ ಮಾಡುವ ಸುಖ, ಲಿಂಗಕ್ಕದು ಭೂಷಣವಾಯಿತ್ತು. ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ_ ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ. ಅಂಗ ಲಿಂಗವೆಂಬನ್ನಕ್ಕರ ಫಲದಾಯಕ. ಲಿಂಗೈಕ್ಯವದು ಬೇರೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->