ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಪ್ಪ ದಿವ್ಯಚಕ್ರಮಂಬುಜ ಪತ್ರೆ ಚಿನ್ನ ಬೆಳ್ಳಿ ತಾಮ್ರ ಮೊದಲಾದವರ ತಗಡುಗಳೊಳಗರು ಚಂದನ ಕುಂಕುಮ ಕರ್ಪೂರ ಗೋರೋಚನಾದಿ ದ್ರವ ದ್ರವ್ಯಂಗಳಿಂ ಬರೆದು ಕಂಡಿಕೆಯಂ ಮಾಡಿ ಶಿರದೊಳ್ತಳೆಯೆ ಸಮಸ್ತ ವಶ್ಯ ರೋಗಾಪಹರಣ ಭೋಗ ಮೋಕ್ಷಾದಿಗಳಪ್ಪವೆಂದುಸಿರ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಫಣೀಶ್ವರ ಕಂಕಣ ಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಮಗ್ನಿಮಂಡಲದ ವರುಣದಿಕ್ಕಿನೇಕದಳದಲ್ಲಿ ಲಕಾರಮ ನದರಾಚೆಯ ಚಂದ್ರಮಂಡಲದ ದಳದ್ವಯದಲ್ಲಿ ವರುಣದಳದೊಳಗೆ ಞಕಾರಮಂ ವರುಣ ವಾಯುಗಳಪದಿಕ್ಕಿನ ದಳದಲ್ಲಿ ಙಕಾರಮಂ ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವರುಣ[ದಳ]ದೊಳಗೆ ಡಕಾರಮಂ ವರುಣ ವಾಯುಗಳಪದಿಕ್ಕಿನ ದಳದ್ವಯದಲ್ಲಿ ಢಕಾರ ಣಕಾರಂಗಳ- ನನುಗೊಳಿಸಿ ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗ ಫಣೀಶ್ವರ ಭೂಷಿತಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಸ್ವಸ್ತಿ ಶ್ರೀಮನ್ನಿರಂಜನಶೂನ್ಯ ನಿಷ್ಕಳ ಸಕಳ ಸದಾಶಿವ ಪಂಚಬ್ರಹ್ಮ ಪರಿಸ್ಫುಟ ಪರತರ ಪರಂಜ್ಯೋತಿರಾಕಾರ ಪಾಹಿಮಾಂ ಪ್ರಣವೋತ್ತಮಾಂಗ ಪರಮ ಶಿವಲಿಂಗ ಕೃಪಾರಸತರಂಗ ಪಾರ್ವತೀ ಪ್ರಾಣಲಿಂಗ ಪಾವನಾಕಾರ ಫಣೀಶ್ವರ ಭೂಷಣ ಸತ್ಯವೇದಾಂತ ಭಾಷಣ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->