ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ ? ಸೋರೆ ವಾರಿಧಿ ಫಣಿ ಅವು ಹರೆಯ ಹಿರಿದಾದಡೆ, ಮನದ ವಿಷ ಬಿಡದು. ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಮನುಜಂಗೆ, ನರೆ ಹಿರಿದಾದಡೇನು, ಮನದ ಅವಗುಣ ಬಿಡದು.
--------------
ಸಕಳೇಶ ಮಾದರಸ
ಏಳು ಸಮುದ್ರ ಉಕ್ಕಿ ಜಂಬೂದ್ವೀಪವ ಮುಸುಕದ ಮುನ್ನ ಧರೆಯ ಹೊತ್ತ ಸರ್ಪ[ನ] ಫಣಿ ಉಡುಗುವುದ ಕಂಡೆ. ಕೂರ್ಮ ಗಜ ಶಿರವಲುಗುವುದ ಕಂಡೆ. ನಾಗಲೋಕ ದೇವಲೋಕವನೊಂದು ಕಪ್ಪೆ ನುಂಗಿ ಏರಿಯತಡಿಯಲೊದರುವುದ ಕಂಡೆ. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಫಣಿ ತನ್ನ ಹೆಡೆಯ ಮಣಿಯ ಕಂಡಹರೆಂದು ಕತ್ತಲೆಗೋಡಿತ್ತಯ್ಯಾ. ಬಳಿ ಬಳಿಯಲ್ಲಿ ಬೆಳಗು ಬರುತ್ತಿರಲು ತಾನಡಗುವ ಠಾವಿನ್ನೆಲ್ಲಿಯಯ್ಯಾ? ತನ್ನರಿವಿನ ಕುರುಹಳಿಯದನ್ನಕ್ಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆಲ್ಲಿಯದಯ್ಯಾ?
--------------
ಚಂದಿಮರಸ
ಆದಿ ಸಿಂಹಾಸನವಾಗಿ, ಫಣಿ ಭೂಷಣವಾಗಿ, ಕೂರ್ಮನುತ್ತಮಾಂಗವಾಗಿ, ದಿಕ್ಕರಿಗಳೆಂಟೂ ಪುಷ್ಪವಾಗಿ, ಹದಿನಾಲ್ಕು ಭುವನದೊಳಗೊಂದಾಗಿ, ಮೇರುಗಿರಿ ನಾಲ್ಕು ದಿಕ್ಕೂ ಶೃಂಗಾರವಾಗಿ, ಮೇರು ರುದ್ರನ ಹಾವುಗೆಯಾದ ಪರಿಯೆಂತೊ ? ಹೊತ್ತುದನತಿಗಳೆದು ನಿಜದೊಳಗೆ ನಿಲಬಲ್ಲಡೆ ನಿರಾಕಾರವ ನಿರ್ಮಿಸಬಾರದು. ನಿರಾಕಾರವ ನಿಯಮಿಸುವಡೆ ಕರಣಾದಿಕಂಗಳಲ್ಲಿ ಕಂದೆರದಡೆ ಜನನಕ್ಕೆ ದೂರ. ಆಕಾರದಾಯು ಆಧಾರವಾಯು ಬ್ರಹ್ಮರಂಧ್ರದೊಳಗೆ ಕಾರಣಪುರುಷ ತಾನಾಗಿದ್ದು, ಆರೈದು ಗಮನಿಸುವನಲ್ಲದೆ ಕಾಯದಿಚ್ಛೆಗೆ ನಡೆದು ಸ್ಥಿತಿಕಾಲಕ್ಕೆ ಗುರಿಯಹನಲ್ಲ. ಕಾಯ ಭೋಗಿಸುವ ಭೋಗವ ಭುಂಜಿಸುವನ್ನಕ್ಕರ ವಾಯುಪ್ರಾಣಿ ಸಾಯದಲ್ಲಾ, ಅದೇನು ಕಾರಣವೆಂದಡೆ ಕರ್ಪುರದ ಪುತ್ಥಳಿಯ ಕಿಚ್ಚಿನಲ್ಲಿ ಸುಟ್ಟು ಅಸ್ಥಿಯನರಸಲುಂಟೆ ? ಜ್ಞಾನಾಗ್ನಿಯಿಂದ ಪ್ರಾಣಭೋಗ ನಷ್ಟ, ಆಕಾರದ ಪ್ರಾಣದ ಪರಿ ನಷ್ಟ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->