ಅಥವಾ

ಒಟ್ಟು 12 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ದೆಸೆಗೆ ಬಾಯ ಬಿಟ್ಟು ಅರಸಿ ಕಾಣದೆ ಕಂಗೆಡ್ಕ್ತುದ್ದೆನಯ್ಯಾ. ದೇವಾ, ಈ ಬಾಯ ಬಿಡುವುದ ಮಾಣಿಸಿ, ಎನಗೆ ಪರಮಪ್ರಸಾದವ ಕರುಣಿಸಿ ರಕ್ಷಿಸಯ್ಯಾ; ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ನೋಟದ ಭಕ್ತಿ ಬಸವನಿಂದಾಯಿತ್ತು; ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ. ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ? ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಆವಾಗಳು ನಿನ್ನವರುಗಳು ನೀನೆಂಬ ಮನವ, ಅತಿ ಉನ್ನತೋನ್ನತವ ಕೊಡು ಕಂಡಾ, ಎಲೆ ಅಯ್ಯಾ, ನಿಮ್ಮ ಧರ್ಮವಯ್ಯಾ. ನಿನ್ನ ಲಾಛನವ ಕಂಡು ತಾತ್ಪರ್ಯವೆಂದು ನಂಬುವ ಮನಸಿಂಗೆ ಮಂಗಳವನೀಯಯ್ಯಾ. ನಿನ್ನವರ ಸಹ ಲೋಕದಲ್ಲಿ ಅವರ ಕೀಳಿಲ ಕಾಯ್ದಿಪ್ಪ ಸುಕೃತವನು ತಪ್ಪದೆ ಕೊಡು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ,
--------------
ಸಿದ್ಧರಾಮೇಶ್ವರ
ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ, ಎನ್ನ ಮನವನೊರೆದು ನೋಡುವುದು ಬಸವಣ್ಣನ ಧರ್ಮವಯ್ಯಾ, ಎನ್ನ ಧನವ ಸೂರೆಮಾಡುವುದು ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ನೋಟಕ್ಕೆ ನೋಯವಾಯಿತ್ತು ನಿಮ್ಮ ಪ್ರಸಾದ; ಶಬ್ದಕ್ಕೆ ಶಬ್ದವಾಯಿತ್ತು ನಿಮ್ಮ ಪ್ರಸಾದ; ಸ್ಪರುಷನಕ್ಕೆ ಸ್ಪರುಷನವಾಯಿತ್ತು ನಿಮ್ಮ ಪ್ರಸಾದ; ಗಂಧಕ್ಕೆ ಗಂಧವಾಯಿತ್ತು ನಿಮ್ಮ ಪ್ರಸಾದ; ರಸಕ್ಕೆ ರಸವಾಯಿತ್ತು ನಿಮ್ಮ ಪ್ರಸಾದ; ಪರಿಣಾಮಕ್ಕೆ ಪರಿಣಾಮವಾಯಿತ್ತು ನಿಮ್ಮ ಪ್ರಸಾದ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಚೆನ್ನಬಸವಣ್ಣನ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ, ನಿರ್ಮಳ ಬಸವಾ, ಶಿವಜ್ಞಾನಿ ಬಸವಾ, ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪದವು. ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ಶಿವನ ಕೀರ್ತಿ ಬಸವಣ್ಣನ ಧರ್ಮವಯ್ಯಾ, ಶಿವನ ಸ್ತೋತ್ರ ಬಸವಣ್ಣನ ಧರ್ಮವಯ್ಯಾ, ಶಿವನ ಮಂತ್ರೋಚ್ಚಾರಣೆ ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
-->