ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ಹೊರಗಾಯಿತ್ತು, ಹೊರಗೆ ಒಳಗಾಯಿತ್ತು. ತಿಳಿದು ನೋಡಲು ಒಳಹೊರಗೆಂಬುದಿಲ್ಲ ನೋಡಾ. ಒಳ ಹೊರಗು ಕೂಡಿದ ತ್ರಿಮಂಡಲದ ಬೆಡಗಿನ ತಾವರೆಯ ಒಳಗೆ ಥಳಥಳಿಸುವ ದಿವ್ಯಪೀಠದ ಮೇಲೆ ಹೊಳೆವ ಲಿಂಗವದು. ಒಳ ಹೊರಗು ಬೆಳಗುತಿಪ್ಪ ಶುದ್ಧ ಜ್ಯೋತಿ ನೋಡಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲುವು ತಾನೆ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಎಲ್ಲರ ಪರಿಯಲ್ಲ ಎನ್ನ ಊಳಿಗ. ಬಸವಣ್ಣ ಚೆನ್ನಬಸವಣ್ಣ ಕೊಟ್ಟ ಕಾಯಕ ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ, ಲೌಕಿಕಕ್ಕೆ, ಬೊಕ್ಕಸದ ಭಂಡಾರಕ್ಕೆ. ಈ ವರ್ತಕ ಶುದ್ಧವಾದ ಮತ್ತೆ ಒಳಗಣ ಮುತ್ತು, ಬೆಳಗುವ ರತ್ನ, ಥಳಥಳಿಸುವ ವಜ್ರ. ಈ ಕಾಯಕದ ಹೊಲಬ ಕೊಟ್ಟ ಮತ್ತೆ ಕಳವಿನಿಸಿಲ್ಲದಿರಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
--------------
ಆನಂದಯ್ಯ
-->