ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬೆಳಗ ನುಂಗಿದ ಕತ್ತಲೆಯಂತೆ, ಕತ್ತಲೆಯ ನುಂಗಿದ ಬೆಳಗಿನಂತೆ,ಹೊಳೆವ ಜ್ಯೋತಿಯ ಕಳೆ ಬಯಲೊಳಡಗಿದಂತೆ,ನಳಿನಮಿತ್ರನ ಬೆಳಗು, ಹೊಳೆವ ಕಂಗಳ ಬೆಳಗುಥಳ ಥಳ ಹೊಳೆದು ಒಂದಾದಂತೆ,ಸರ್ವಜೀವರೊಳು ಕಳೆ ಒಂದಲ್ಲದೆ ಎರಡಿಲ್ಲ.ಸಂದಳಿದ ಸಮರಸೈಕ್ಯ,ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.