ಕಂಗಳ ಕಾಮವ ಜರಿದವರ ಕಂಡಡೆ
ಎನ್ನ ಲಿಂಗಯ್ಯಾ ಬನ್ನಿ ಬನ್ನಿ ಎಂಬರಯ್ಯಾ !
ರುದ್ರಲೋಕದ ರುದ್ರಗಣಂಗಳೆಲ್ಲರು
ಬನ್ನಿ ಬನ್ನಿ ಎಂಬರಯ್ಯಾ !
ಸರ್ವಲೋಕದ ಶ್ರೇಷ್ಠಜನಂಗಳು
ಸಾಷ್ಟಾಂಗವ ಎರಗುವರಯ್ಯಾ !
ಬಸವಾದಿ ಪ್ರಮ ಥಗಣಂಗಳು ಕಂಡು
ಬಳಲಿದಿರಿ ಬಾರಯ್ಯಾ ಎಂದು ಅಡಿಗೆರಗುವರಯ್ಯಾ !
ಅಮುಗೇಶ್ವರಲಿಂಗವನರಿದ ಶರಣರು ಅಡಿಗೆರಗುವರಯ್ಯಾ.