ಗುರುಕರಜಾತರಾಗಿ ಬಂದವರೆಂದು
ಹರಿವಾಣತುಂಬಿ ಸೂಸುತ ನೀಡಿಸಿಕೊಂಡು,
ತೋರಿಕೊಂಬ ಭೇದವನರಿಯದೆ
ಕುಂಡಿತುಂಬಿದ ತೊಂಡುಪಶುವಿನಂತೆ ಕೈಬಾಯಿದುಡುಕಿ ತಿಂದು,
ಸೂರ್ಯಾಡಿ ಸಮಯಾಚಾರಕ್ಕೆ ಛೀ ಛೀ ಎಂದು
ಢೂಕ ಹಾಕುವರೆಂದು ಕೊಟ್ಟು ಕೊಟ್ಟುಂಬ
ಸೊಟ್ಟನಡೆಯ ಭ್ರಷ್ಟ ಮೂಳ ಹೊಲೆಯರ
ಹೊಟ್ಟೆಯ ತುಳಿದುಹಾಕುವರು ದುರ್ಗತಿಗೆ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.