ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಚ್ಚೆಯ ಬಚ್ಚಲ ಶೋಧಿಸುವವರಿಗೆ ಚಿಲುಮೆಯ ಆಯತವೇಕೊ ? ಸತಿಯರ ನರಮಾಂಸವ ಭುಂಜಿಸುವವರಿಗೆ ಪರಪಾಕವರ್ಜಿತವೆಂದು ಸ್ವಯಂಪಾಕವೇಕೊ ? ಅಷ್ಟೋತ್ತರಶತ ವೇದವ ಓದುವವರಿಗೆ ಅಚ್ಚಪ್ರಸಾದವೇಕೊ ? ಇಂತೀ ತ್ರಿವಿಧ ಡಂಬಿನ ಭಕ್ತಿಗೆ ಊರ ಮುಂದಣ ಡೊಂಬನೆ ಸಾಕ್ಷಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹರ[ಹಿ] ಮಾಡುವುದು ಹರಕೆಯ ಕೇಡು, ನೆರಹಿ ಮಾಡುವುದು ಡಂಬಿನ ಭಕ್ತಿ. ಹರ[ಹ]ಬೇಡ, ನೆರಹಬೇಡ ಬಂದ ಬರವನರಿತು ಮಾಡಬಲ್ಲಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ. 228
--------------
ಬಸವಣ್ಣ
-->