ಅಥವಾ

ಒಟ್ಟು 8 ಕಡೆಗಳಲ್ಲಿ , 4 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283
--------------
ಬಸವಣ್ಣ
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ, ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ, ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ, ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ, ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ. 379
--------------
ಬಸವಣ್ಣ
ಒಂದುವನರಿಯದ ಸಂದೇಹಿ ನಾನಯ್ಯಾ, ನಂಬುಗೆುಲ್ಲದ ಡಂಬಕ ನಾನಯ್ಯಾ, ನಿಮ್ಮ ನಂಬಿದ ಶರಣರ ಡಿಂಗರಿಗ ನಾನು, ಕೂಡಲಸಂಗಮದೇವಾ. 465
--------------
ಬಸವಣ್ಣ
ಸಟೆ ಹಿರಿದಾಯಿತ್ತು ಇನ್ನೇವೆನಿನ್ನೇವೆ. ದಿಟ ಕಿರಿದಾಯಿತ್ತು ಇನ್ನೇವೆನಿನ್ನೇವೆ. ಡಂಬಕ ಮಿಗಿಲಾಯಿತ್ತು ಇನ್ನೇವೆನಿನ್ನೇವೆ. ನಂಬುಗೆಯೆಯ್ದದಿನ್ನೇವೆನಿನ್ನೇವೆ. ಆಮಿಷ ಘನವಾಯತ್ತಿನ್ನೇವೆನಿನ್ನೇವೆ. ತಾಮಸ ಘನವಾಯಿತ್ತಿನ್ನೇವೆನಿನ್ನೇವೆ. ಚೆನ್ನಮಲ್ಲಿಕಾರ್ಜುನಯ್ಯಾ ಭಕ್ತಿಯೆನ್ನಲ್ಲಿಲ್ಲ ಇನ್ನೇವೆನಿನ್ನೇವೆ.
--------------
ಅಕ್ಕಮಹಾದೇವಿ
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ ಕರ್ಮಸ್ಥಿತಿ ಬೆನ್ನ ಬಿಡದು. ಅನಂತಕೋಟಿ ಸನ್ಮಾನವ ಮಾಡಿದರೇನು ನಿಮಿಷದ ಉದಾಸೀನ ಕೆಡಿಸಿತ್ತು. ಕೂಡಲಸಂಗಮದೇವಾ ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ. 383
--------------
ಬಸವಣ್ಣ
ಭಕ್ತರಲ್ಲದವರೊಡನೆ ಆಡದಿರು, ಆಡದಿರು. ಅರ್ಥದಾಸೆಗೆ ದುರ್ಜನರ ಸಂಗವ ಮಾಡದಿರು, ಮಾಡದಿರು. ಉತ್ತಮರ ಕೆಡೆನುಡಿಯದಿರು, ನುಡಿಯದಿರು. ಮುಂದೆ ಹೊತ್ತ ಹೊರೆ ದಿಮ್ಮಿತ್ತಹುದು. ನಿತ್ಯವಲ್ಲದ ದೈವಕ್ಕೆರಗದಿರು, ಎರಗದಿರು. ಕರ್ತು ಸೊಡ್ಡಳನ ನೆರೆ ನಂಬು, ಡಂಬಕ ಬೇಡ.
--------------
ಸೊಡ್ಡಳ ಬಾಚರಸ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
ಆದ್ಯರ ವಚನ ಪರುಷವೆಂಬೆನು, ಆ ಪರುಷವೆನಗೆಂತು ದೊರೆಕೊಂಬುದಯ್ಯಾ ತನು ಮನ ಧನವ ವಿವರಿಸಿ ನುಡಿವೆ ಸೋಂಕಿಂಗೆ ಸೈರಿಸಲಾರೆ, ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ, ಕೂಡಲಸಂಗಮದೇವಾ. 313
--------------
ಬಸವಣ್ಣ
-->