ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಡು ಕರೆವಾಗ ಈಯಿತ್ತೆ? ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ? ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ? ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ? ಇಂತಿವು ವಿಶ್ವಾಸದ ಹಾಹೆ. ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ. ಈ ಗುಣ ತಪ್ಪದೆಂದು ಸಾರಿತ್ತು ಡಂಗುರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 61 ||
--------------
ದಾಸೋಹದ ಸಂಗಣ್ಣ
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಏಡಿಸಿ ಕಾಡಿತ್ತು ಶಿವನ ಡಂಗುರ, ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲಿಲದಿದ್ದಡೆ, ಬೇಡಿತ್ತನೀವನು ಕೂಡಲಸಂಗಮದೇವ. 234
--------------
ಬಸವಣ್ಣ
ಅಪಾರ ಮಹಿಮನೆಂಬುದು ನಿಮ್ಮ ಭೇರಿ. ಬೇಡಿತ್ತನೀವನೆಂಬುದು ನಿಮ್ಮ ತಮ್ಮಟ. ಜಗವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ. ಪರದೈವವಿಲ್ಲವೆಂಬುದು ನಿಮ್ಮ ಡಮರುಗ. ಶಿವ ಕಾಡನೆಂಬವರ ಬಾಯ ತ್ರಿಶೂಲದಲ್ಲಿರಿವ ಬಳ್ಳೇಶ್ವರಲಿಂಗದ ಡಂಗುರ ಮೂಜಗದೊಳಗಯ್ಯಾ.
--------------
ಬಳ್ಳೇಶ ಮಲ್ಲಯ್ಯ
ಬಿಡಿ ಬಿಡಿ ವಿಷ್ಣುವ, ನಿಮಗೆ ಗತಿಗೆ ಸಾಧನವಲ್ಲ, ಕಂಡಿರೆ ಎಲೆ ದ್ವಿಜರಿರಾ. ಬಿಡದೆ ಧ್ಯಾನಿಸಿ ಶಿವನ ಅಡಿದಾವರೆಯ, ಬಿಡದೆ ಪೂಜಿಸಿ ಶಿವನ ಶ್ರೀಪಾದಪದ್ಮಂಗಳ ನಿಮಗೆ ತಡೆಯಿಲ್ಲದ ಮುಕ್ತಿದೊರಕೊಂಬದು. ಅಥರ್ವಣವೇದ: `ಈಶಾನಃ ಶಿವ ಏಕೋಧ್ಯೇಯ' ಶಿವಂಕರತ್ಸರ್ವಮನ್ಯತ್ಪರಿತ್ಯಜ್ಯ ಇತಿ ಬ್ರಹ್ಮನೀತಿಯಲಿ: ಆತ್ಮ ಸರ್ವಂ ಪರಿತ್ಯಜ್ಯ ಶಿವಾದನ್ಯಂತು ದೈವತಂ ತಮೇವ ಶರಣಂ ಚೇತ್ಸದ್ಯೋಮುಕ್ತಿಂ ಸುಗಚ್ಛತಿ || ಕೆಡಬೇಡ, ಸಾರಿ ಡಂಗುರ ಹೋಯ್ಯಿತ್ತು , ಶ್ರುತಿಯ ನೋಡಯ್ಯ. ಬಸವಪ್ರಿಯ ಕೂಡಲ ಚೆನ್ನಸಂಗಯ್ಯನನೆ ಬಿಡದೆ ಧ್ಯಾನ ಪೂಜೆಯ ಮಾಡಲು ಕೊಡುವ ನಿಮಗೆ ಪರಮಪದವನು.
--------------
ಸಂಗಮೇಶ್ವರದ ಅಪ್ಪಣ್ಣ
ಶಿವನೊಬ್ಬನೆ ಜಗವೆಲ್ಲಕ್ಕೊಡೆಯನೆಂದು ಹೊಡೆವ ಭೇರಿ ನಿಸ್ಸಾಳವಯ್ಯಾ. ಶಿವನಲ್ಲದೆ ಅತಃಪರವಿಲ್ಲೆಂದು ಒದರುವ ವೇದ ಶಾಸ್ತ್ರ ಪುರಾಣಾಗಮಂಗಳಯ್ಯಾ. ಶಿವನು ಅಲ್ಲವೆಂಬವನ ಬಾಯ ತ್ರಿಶೂಲದಲ್ಲಿರಿವುದು. ಬಳ್ಳೇಶ್ವರನ ಡಂಗುರ ಜಗದೊಳಗಯ್ಯಾ.
--------------
ಬಳ್ಳೇಶ ಮಲ್ಲಯ್ಯ
ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ? ನಿನ್ನ ಮರುತನ ಜಗದ ಡಂಗುರ ನೋಡಾ! ಇನ್ನಾರಿಗೆಯು ದೃಶ್ಯವಿಲ್ಲ. ಐಕ್ಯಂತು ಭಾವ ದೃಷ್ಟಿ. ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು.
--------------
ಚಂದಿಮರಸ
ಗುರುಪಾದೋದದಿಂದ ಂಗಮಜ್ಜನ ಮಾಡುವೆನೆಂಬ ಭಾಷೆ ಎನ್ನದಯ್ಯಾ. ಗುರುಪಾದೋದದಿಂದ ಸ್ವಯಂಪಾಕರಚನೆ ಎಂಬ ಭಾಷೆ ಎನ್ನದಯ್ಯಾ. ಗುರುಪಾದೋದದಿಂದ ಶಿರಃಸ್ನಾನ, ಅಂಗಸ್ನಾನ, ಮುಖಸ್ನಾನ ಎಂಬ ಭಾಷೆ ಎನ್ನದಯ್ಯಾ. ಗುರುಪಾದೋದಕಂದ ಸರ್ವಶುದ್ಧ ಎಂಬ ಭಾಷೆ ಎನ್ನದಯ್ಯಾ. ಇದು ಕಾರಣ, ಗುರುವೆ ಘನವೆಂದು, ಗುರುಪಾದೋದಕವೆ ಎನ್ನ ಮೋಕ್ಷದ ಬೀಡೆಂದು ಡಂಗುರ ಹೊಯ್ವೆ. ಇದು ಕಿಂಚಿತ್‍ಹುಸಿಯಾದಡೆ ಕಪಿಲಸಿದ್ಧಮಲ್ಲಿಕಾರ್ಜುನ ನಾಯಕನರಕದಲ್ಲಿಕ್ಕದೆ ಮಾಣ್ಬನೆ? ಮಡಿವಾಳ ತಂದೆ.
--------------
ಸಿದ್ಧರಾಮೇಶ್ವರ
-->