ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ. ಆಳ್ದರೆಂದವರಾರು ? ಅವರು ನಿಮ್ಮ ಕೈಯಲ್ಲಿದ್ದಂಥವರೂ ಅವರಾಳ್ದರಲ್ಲ. ಅವರೇನು ? ಅವರು ನಿಮ್ಮ ಇಷ್ಟರುದ್ರರಾಗರೆ ? ಜಂಗಮವಾಗಿದ್ದಹರು ಇವರು ಬೇಡವೆ ? ಇಹರೆ ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ. ನಾವು ಇರಲು ಬಲ್ಲಲ್ಲಿ ಇರಿ, ಕೈಯಲ್ಲಿ ಕೊಳ್ಳಿರೆ. ಮುನ್ನವೆ ಕೊಂಡಿದ್ದೆನು, ಎನ್ನನೇಕೆ ಒಲ್ಲೆಯಯ್ಯಾ, ನೀನು ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾನು. ನಿಮ್ಮ ನಂಬುವದಿಲ್ಲ. ಹೊಣೆಯ ಕೊಟ್ಟೆಹೆನು. ಅದ ಕಂಡು, ಮಾಚಿದೇವ ಮಹಾಪ್ರಸಾದಿ ಹೊಣೆಯಾಗಯ್ಯಾ. ನಂಬೆನು ಜೀಯಾ, ನಿಮ್ಮಾಣೆ. ಪತ್ರವಾದರೆ ಕೊಟ್ಟೆಹೆನು, ಇರಲಿಕೆ ಠಾವೆಲ್ಲಿ ? ಕರದಲ್ಲಿಯೆ ಅಲ್ಲ, ಉರದಲ್ಲಿಯೆ ಅಹುದು. ನಂಬಿದೆನು, ಸುಖದಲ್ಲಿಹ ಧರ್ಮೇಶ್ವರ[ಲಿಂಗಾ].
--------------
ಹೆಂಡದ ಮಾರಯ್ಯ
ಸ್ವಯಂಪಾಕದಲ್ಲಿ ಆದ ದ್ರವ್ಯವ, ಪರರು ಕಂಡಹರೆಂದು ಮರೆಮಾಡಿಕೊಂಡಿಪ್ಪ ಪರಿಯಿನ್ನೆಂತೊ ? ಮಹಾಘನವನಾ ಧರಿಸಿ ನುಡಿವುತ್ತಿಪ್ಪ ನಾಲಗೆ, ಛಂಡತಾಂಬೂಲ ಮೊದಲಾದ ಭಾವವನೆಲ್ಲರೂ ಕಾಣುತ್ತ, ವ್ರತದ ಠಾವೆಲ್ಲಿ ಸಿಕ್ಕಿತ್ತು ? ಮೊಲೆಯ ಮುಚ್ಚಿ, ಸೀರೆಯ ತೆಗೆದಂತಾಯಿತ್ತು. ಇಂತಿವನರಿದು, ಇದಿರಿಚ್ಛೆಯ ಮರೆದು, ತನ್ನ ಸ್ವಯಿಚ್ಛೆಯನರಿದುದು, ತನ್ನ ಮುಚ್ಚು, ಘನಲಿಂಗದ ಅಚ್ಚು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ವ್ರತಾಚಾರಕ್ಕೆ ಇಕ್ಕದ ಗೊತ್ತು.
--------------
ಶಿವಲೆಂಕ ಮಂಚಣ್ಣ
-->