ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಏಳೆಂಟು ಠಾವಿನ ಮಠವ ಶುದ್ಧವ ಮಾಡಿ ಧಾರುಣಿಯ ಸುದ್ದಿಯನು ಹದುಳಮಾಡಿ ಆರೈದು ಸಕಲ ನಿಷ್ಕಲದೊಳಗೆ ವೇದ್ಯ ಗೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕೇಳವ್ವಾ, ಕೆಳದಿ, ಹೋಗೆಲಗವ್ವಾ, ನೋಡವ್ವಾ ಕೆಳದಿ; ಅವನಿಪ್ಪ ಠಾವಿನ ನೆಲೆಯೆನಗೆ ತೋರೆಲಗವ್ವಾ; ಅವನಿಬ್ಬಟ್ಟೆಗಾರನು, ಇಬ್ಬೀಡಲಿಪ್ಪನು; ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಂಡೆನು, ಬಾರಾ.
--------------
ಸಿದ್ಧರಾಮೇಶ್ವರ
ನಾ ಬಂದ ಹಾದಿಯಲ್ಲಿ ಎಂಬತ್ತು ನಾಲ್ಕು ಲಕ್ಷ ಕಳ್ಳರು ಕಟ್ಟಲಂಜಿದರು. ಮೂರು ಠಾವಿನ ಅನುವ ಮೀರಿದೆ. ಬಂದು ನಿಂದಿರಲಾಗಿ, ಈ ದೇಶದ ಅಂದವೇನೊ ಎಂದು ಕೇಳಿದ, ಗೊಹೇಶ್ವರನ ಶರಣ ಅಲ್ಲಮನು.
--------------
ಗಾಣದ ಕಣ್ಣಪ್ಪ
ಆತ್ಮಂಗೆ ಜೀವ ಪರಮನೆಂದು ವಿಭೇದವ ತಿಳಿವಲ್ಲಿ ಆ ಅರಿವಿಂಗೆ ಆವ ಠಾವಿನ ಕುರುಹು? ಸಂಪುಟದ ಘಳಿಗೆಯಂತೆ ಮಡಿಕೆಯ ಭೇದ. ಜೀವ ಪರಮನ ಉಭಯದ ಯೋಗ. ಮುಕುರದ ಒಳ ಹೊರಗಿನಂತೆ ಘಟವೊಂದು. ದ್ರವ್ಯವೇಕವ ಮಾಡುವ ಕುಟಿಲದಿಂದ ಉಭಯ ಭಿನ್ನವಾಯಿತ್ತು. ಈ ಗುಣ ಜೀವ ಪರಮನ ನೆಲೆ. ಇದಾವ ಠಾವಿನ ಅಳಿವು ಉಳಿವು? ಈ ಗುಣವ ಭಾವಿಸಿ ತಿಳಿದಲ್ಲಿ ಸ್ವಾನುಭಾವ ಸಂಗ ಸಾವಧಾನದ ಕೂಟ, ಜ್ಞಾನನೇತ್ರ ಸೂತ್ರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ, ಆವ ಠಾವಿನಲ್ಲಿ ಗಾಯ ? ಅದಾವ ಠಾವಿನ ಕುರುಹು ? ಲಿಂಗದಷ್ಟ ಅಂಗಕ್ಕಾದಲ್ಲಿ ಅದಾರಿಗೆ ಮೊರೆ ? ಅದಾರಿಗೆ ಕೈಲೆಡೆ ? ಆಚಾರಗೂಡಿಯೆ ಆ ಘಟವಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ಇದಿರೆಡೆಯಿಲ್ಲದೆ ಕೂಡಬೇಕು.
--------------
ಅಕ್ಕಮ್ಮ
-->