ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಶುದ್ಧಾವಸ್ಥೆಯ ದರ್ಶನವೆಂತೆಂದಡೆ : ಮುಂದೆ ಹೇಳಿದ ಕೇವಲದಲ್ಲಿ ಒಂದೆಂಬುದು ಕೆಟ್ಟ ಠಾವನು ಸಕಲದಲ್ಲಿ ಕರಣಂಗಳ ಕೂಟವನು ಬಿಟ್ಟು, ಈ ಎರಡವಸ್ಥೆಯು ಇವನಿಗೆ ಪ್ರತಿ ಇಲ್ಲವೆಂದು ಕಂಡುದು ಶುದ್ಧಾವಸ್ಥೆ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯ ಮೇಲಣ ಕಣಿಯ ತಂದು, ಪೂಜಾವಿಧಾನಕ್ಕೊಳಗಾದ ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು. ಮೂವರಿಗೆ ಹುಟ್ಟಿದಾತನೆಂದು ಪೂಜಿಸುವಿರೊ ? ಭೂಮಿಗೆ ಹುಟ್ಟಿ ಶಿಲೆಯಾಯಿತ್ತು ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು. ಗುರುಮುಟ್ಟಿ ಲಿಂಗವಾಯಿತ್ತು. ಇದು ಬಿದ್ದಿತ್ತೆಂದು ಸಮಾಧಿಯ ಹೊಕ್ಕೆವೆಂಬರು ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ವ್ರತವು. ಕಟ್ಟುವ ಠಾವನು ಮುಟ್ಟುವ ಭೇದವನು ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಜಾಗ್ರದಲ್ಲಿಯ ಸ್ವಪ್ನವಾವುದು ? ಶಬ್ದಾದಿಗಳೈದು, ಶ್ರೋತ್ರಾದಿಗಳೈದು, ವಚನಾದಿಗಳೈದು, ವಾಗಾದಿಗಳೈದು, ಕರಣ ನಾಲ್ಕು, ಪುರುಷನೊಬ್ಬ, ಇಂತೀ ಇಪ್ಪತ್ತೈದು ಕರಣಂಗಳೊಡನೆ ಕೂಡಿ ಅವನನು ಅವನಕಂಡ ಠಾವನು ಹೇಳುವುದು ಜಾಗ್ರದಲ್ಲಿಯ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->