ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಾಯ ಕಲ್ಪಿತಕ್ಕೊಳಗು, ಜೀವ ಭವಕ್ಕೊಳಗು.ಈ ಉಭಯದ ಠಾವನರಿಯದೆ ಧಾವತಿಗೊಂಬರೆಲ್ಲರು.ಕಾವಲಾದರು ಕಾಮನ ಕರ್ಮವಕ್ಕೆ.ಈ ಭಾವವನರಿತು ತೊಲಗು ಸಾರಿದೆ,ಸಾರಧಿಯ ಪತಿಯೊಡೆಯ ಸುತವೈರಿ ಮಾರೇಶ್ವರಾ.
ಶ್ವಾನಜ್ಞಾನಿಗಳೆಲ್ಲ ಸಮ್ಯಕ್‍ಜ್ಞಾನವ ಬಲ್ಲರೆ ?ಲೌಕಿಕದ ಧ್ಯಾನಮೌನಿಗಳೆಲ್ಲ ಸ್ವಾನುಭಾವಿಗಳಹರೆ ?ಇದರ ಭಾವವನರಿಯದೆ,ಭ್ರಮೆಯೊಳಗೀ ವಸ್ತುವಿನ ಠಾವನರಿಯದೆ ವಾಯವಾಗಿ,ಇಂತೀ ಗಾವಿಲರಿಗೆಲ್ಲಿಯದೊ ಸಮ್ಯಕ್‍ಜ್ಞಾನದ ಹೊಲಬು ?ಇಂತಿವ ನೀನೆ ಬಲ್ಲೆ, ನಾನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.