ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತಿನೈದೊಂದೆಳೆಯ ಕಟ್ಟಾಣಿ ಎನ್ನ ಕೊರಳಲ್ಲಿ ಒಪ್ಪುತಿಪ್ಪುದು. ಸುತ್ತಿಬಂದ ಒಡ್ಡ್ಯಾಣ ಎನ್ನ ನಡುಮಧ್ಯದಲ್ಲಿ ಝಗಝಗಿಸುತಿಪ್ಪುದು. ಕಾಲ ರುಳಿ ಕಣ್ಣಿಂಗೆ ಮಿರುಗುತಿಪ್ಪುದು, ನವನೂತನ ಚಿಂತಾಕರ ಮಧ್ಯೆಕೊರಳಿಗೆ ಸಮನಾದ ಮೇಲೆ, ತವಕ ಮುಂದುಗೊಂಡಿತ್ತು ತಡವೇಕೆ ನಡೆ ನಮ್ಮ ಗುರುನಿರಂಜನ ಚನ್ನಬಸವಲಿಂಗವ ಮನ್ನಿಸಿ ಕರತನ್ನಿ.
--------------
ದೇಶಿಕೇಂದ್ರ ಸಂಗನಬಸವಯ್ಯ
-->