ಕರಸ್ಥಲದ ಲಿಂಗ ಕೈಸೇರಿ ಇರು
ತಿರಲನ್ಯ ಭಯಗಳುಂಟೆ ಗುರುವೆ ?
ಪದ :ಕಂಠೀರ[ವ]ನಿಹ ವನದೊಳು ಕರಿಯಭಯ
ವುಂಟೇ ಇನ್ನಾ ತೆರದೊಳು
ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ
ತುಂಟಕದ ಭಯಗಳುಂಟೆ ಗುರವೆ ? | 1
|
ಕರಿಯನೇರಿ ಪೋಗುತಿರಲು ಶುನಿ ಬಗುಳುತ
ಬರುತಿರುವ ಭಯಗಳುಂಟೆ ನೋಡಾ.
ಹರನೆನ್ನ ಕರದೊಳಿರಲು ಪಂಚೇಂದ್ರಿ
ದುರಿತ ಭಯದಂಜಿಕೆಯುಂಟೆ ಗುರುವೆ ?
| 2 |
ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ
ಕಮಲದೊಳು ಸುಳಿವ ಹಂಸ ತಾನೆ
ಭ್ರಮರನಂತೆ ಕರಕಮಲದ ಲಿಂಗವ ತಾ
ಭ್ರಮಿಸೆರಗೆ ಭಯಗಳುಂಟೆ ಗುರುವೆ ? | 3 |
ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು
ಬರುವ ಬ್ಥೀತಿಯುಂಟೆ ನೋಡಾ.
ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ
ಇರೆ ಮಾಯದ ಬ್ಥೀತಿಯುಂಟೆ ಗುರುವೆ ? | 4 |
ಉರಗ ಮುಟ್ಟಲು ಓರ್ವನ ತನು ವಿಷದಿ
ಭರಿತವಾದಂತೆ ಶರಣ
ಶರೀರವನು ಸೊಮ್ಮು ಸೋಂಕಿ
ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? |
5 |
ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ
ಝಗಝಗಿಸುತಿದೆ ಕೋಯೆಂದು ನುಡಿದು
ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ
| 6