ಉರಿದು ಬೇವುದು ಉರಿಯೋ, ಮರನೋ?
ಹರಿದು ಕೊರೆವುದು ನೆಲನೋ, ನೀರೊ?
ನೆಲ ನೀರಂತಾದುದು ಅಂಗಲಿಂಗಸಂಬಂಧ.
ಉರಿ ಮರೆದಂತಾದುದು ಪ್ರಾಣಲಿಂಗಸಂಬಂಧ.
ಇಂತೀ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ.
ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲದ ವಳಿಯಂತೆ,
ಮಂಜಿನ ರಂಜೆಯ ಝಂಝಾಮಾರುತನಂತೆ.
ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.