ಅಥವಾ

ಒಟ್ಟು 11 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಂಗ ಘನವೆಂಬೆನೆ? ಕಲ್ಲಿನ ಮಗ; ಪಾದೋದಕ ಘನವೆಂಬೆನೆ? ಇಂದ್ರನ ಮಗ; ಪ್ರಸಾದ ಘನವೆಂಬೆನೆ? ಶೂದ್ರನ ಮಗ; ವಿಭೂತಿಯ ಘನವೆಂಬೆನೆ? ಗೋವಿನ ಮಗಳು. ಇವೆಲ್ಲ ಒಂದೊಂದರಿಂದ ಜನನವಾಯಿತ್ತು ; ನೀವಾರಿಂದ ಜನನವಾದಿರಿ ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು. ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ ಮೂಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ? ತನು_ಮನ_ಧನದಲ್ಲಿ ವಂಚಕನಾಗಿ ಕಿರಿದಾದ. _ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ. ಘನವ ಬಲ್ಲವರಾರೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಲಿಂಗ ಘನವೆಂಬೆನೆ? ಗುರುವಿಡಿದು ಕಂಡೆ. ಗುರು ಘನವೆಂಬೆನೆ? ಸಾಕಾರವಿಡಿದು ಕಂಡೆ. ಸಾಕಾರ ಘನವೆಂಬೆನೆ? ನಿರಾಕಾರವಿಡಿದು ಕಂಡೆ. ನಿರಾಕಾರ ಘನವೆಂಬೆನೆ? ಜಂಗಮವಿಡಿದು ಕಂಡೆನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->