ಅಥವಾ

ಒಟ್ಟು 23 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಪರ್ವತದ ಮಹಿಮೆಯದು ಘನವೆಂದಡೆ, ಪರ್ವತದಲ್ಲಲ್ಲದೆ ವೇಶ್ಯಾಕೋಶಕ್ಕೆ ಹರಿದು ಹರನೆಂದೆನಿಸದಿರಯ್ಯಾ. ಶರಣರ ಮಹಿಮೆಯದು ಘನವೆಂದಡೆ, ಶಿವಶರಣನಲ್ಲಲ್ಲದೆ ಕಿಂಚಿಜ್ಞ ಮಾನವನಲ್ಲಿ ಹರಿಯದು ನೋಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ ಸರ್ವವೂ ನಿನ್ನ ಮಾಯೆ ! ಒಬ್ಬರನ್ನೊಳಕೊಂಡಿತ್ತೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಮನದಲ್ಲಿ ಲಿಂಗ ಘನವೆಂದಡೆ ಸಾಲದೆ ಅಯ್ಯಾ ? ವಚನದಲ್ಲಿ ಜಂಗಮ ಘನವೆಂದಡೆ ಸಾಲದೆ ಅಯ್ಯಾ ? ಮನಸಿನ ವಚನದ ದಿಟಕ್ಕೆ ದೂರವೆ ಅಪ್ರಮಾಣವೆ ಅಯ್ಯಾ ? ಹಿತ್ತಿಲಲ್ಲಿ ನಿಧಾನವಿರ್ದಡೇನು ತೆಗೆದು ಭೋಗಿಸದನ್ನಕ್ಕರ ? ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ, ಅವರಂದಂದಿಗೆ ದೂರವಯ್ಯಾ
--------------
ಸಂಗಮೇಶ್ವರದ ಅಪ್ಪಣ್ಣ
ನುಡಿವಲ್ಲಿ ದೋಷವನಾರಿಸದೆ ಬಾಯಿಚ್ಛೆಗೆ ಬಂದಂತಾಡಿದಡೆ ಅದು ಹೆಮ್ಮೆಯಲ್ಲದೆ ಸಹಜಜ್ಞಾನವಲ್ಲ. ಅದೇನು ಕಾರಣವೆಂದಡೆ, ಪಾಷಾಣದ ಮೂರ್ತಿ ಘನವೆಂದಡೆ ಅಗ್ನಿಯಿಂದ ಭಂಗ. ಅಗ್ನಿ ಘನವೆಂದಡೆ ತೋಯದಿಂದ ಭಂಗ. ತೋಯ ಘನವೆಂದಡೆ ಮಾರುತನಿಂದ ಭಂಗ. ಮಾರುತ ಘನವೆಂದಡೆ ಬಯಲಿನಿಂದ ಭಂಗ. ಬಯಲು ಘನವೆಂದಡೆ ಅಂತಃಕರಣದಿಂದ ಭಂಗ. ಅಂತಪ್ಪಂತಃಕರಣ ಘನವೆಂದಡೆ ಮಾಯೆಯಿಂದ ಭಂಗ. ಮಾಯೆ ಘನವೆಂದಡೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ ಪರಬ್ರಹ್ಮದಿಂದ ಭಂಗ ಕೇಳಾ, ಮಡಿವಾಳ ತಂದೆ.
--------------
ಸಿದ್ಧರಾಮೇಶ್ವರ
ಕಲ್ಲು ಘನವೆಂದಡೆ, ಂಗದ ಪೂಜ್ಯತ್ವ ಕಲ್ಲಿಗೆ ಬಂದಿತೇನಯ್ಯಾ? ನೀರು ಘನವೆಂದಡೆ, ಪಾದೋದಕಕ್ಕೆ ಸರಿಬಂತೇನಯ್ಯಾ? ಶೂದ್ರ ಘನವೆಂದಡೆ, ಅಷ್ಟೆ ೈಶ್ವರ್ಯ ಕೊಟ್ಟಿತೇನಯ್ಯಾ? ಘನಕ್ಕೆ ಘನವು ನಿಮ್ಮಷ್ಟಾವರಣಂಗಳು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->