ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವ್ಯವಹಾರವ ಮಾಡಿದಲ್ಲಿ ಲಾಭವ ಕಾಣದಿರ್ದಡೆಆ ವ್ಯವಹಾರವೇತಕ್ಕೆ?ಗುರುಲಿಂಗ ಜಂಗಮಕ್ಕೆ ಖ್ಯಾತಿಗೆ ಮಾಡಿದಡೆಮೊದಲು ತಪ್ಪಿ ಲಾಭವನರಸುವಂತೆ,ಕಾಮಹರಪ್ರಿಯ ರಾಮನಾಥಾ.
ಭಕ್ತನಾದಲ್ಲಿ ದ್ರವ್ಯವ ಸವೆಸಿ ಮರ್ಮವನರಿಯದೆ ವ್ಯರ್ಥವಾಯಿತ್ತು.ಖ್ಯಾತಿಗೆ ಇಕ್ಕಿ ಕೊಟ್ಟು ಮಾಡುವಾತನ ಭಕ್ತನೆಂದಡೆವಾಸಿಯ ಮಾತಿಗೆ ಸತ್ತವನ ಪಾಶದಂತೆ ಆತನ ಮಾಟ.ಮಾಟವನರಿದುಣ್ಣಬೇಕು,ಸರ್ವವ ನೇತಿಗಳೆದ ನಿರ್ಮಲಗುರು.ಆತನ ನಿನ್ನ ನೀನರಿ,ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ,ಪೂಜೆಯ ಮಾಡದೆ ರಾಜದ್ವಾರದಲ್ಲಿ ಸುಳಿದುಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೋ?ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತಲ್ಲೀಯವಾದಶರಣರತ್ತತ್ತಲಲ್ಲದೆ ಇತ್ತಿತ್ತಲೆಂತಿಹರೋ.