ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂಚರ ಖೇಚರ ಅಗೋಚರ ಚರಾಚರ ಉನ್ಮನಿಯೆಂಬ ಪಂಚಮುದ್ರೆಗಳಿಂದತ್ತತ್ತ, ನಿಃಶೂನ್ಯ ನಿರಾಳ ನಿಃಕಲ ನಿರವಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ, ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ, ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ, ಆಕಾಶ ಮಾರುತರಿಲ್ಲದ ಮುನ್ನ, ಅಂಬುಧಿ ಕಮಠರಿಲ್ಲದ ಮುನ್ನ_ ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ ಹಿಮಕರದಿನಕರ ಸುಳುಹಿಲ್ಲದ ಮುನ್ನ_ ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ, ಗುಹೇಶ್ವರನಿರ್ದ ತನ್ನ ತಾನರಿಯದಂತೆ
--------------
ಅಲ್ಲಮಪ್ರಭುದೇವರು
>ಒಡಲುಗೊಂಡು ಒಡಲವಿಡಿಯದೆ ಒಡಲಿಲ್ಲದ ನಿಜವ ಬೆರಸೆಲವೊ ! ನರರು ಸುರರು ಕಿನ್ನರರು ಖೇಚರ ಪರಮ ಪದವಿಯನರಿಯದ ಕಾರಣ ಭವದೊಳಗೆ ಸಿಲುಕಿದರು. ಕೂಡಲಚೆನ್ನಸಂಗನ ನಿಜರೂಪನೆ ಬೆರಸಿರೊ ಮುಮುಕ್ಷುಗಳಿರಾ.
--------------
ಚನ್ನಬಸವಣ್ಣ
ಅನ್ನದ ಗೊಡವಿಲ್ಲದಾತಂಗೆ ಆರಂಭದ ಗೊಡವಿಯುಂಟೇ ? ಖೇಚರ ಪವನಸಾಧಕಂಗೆ ಭೂಚರದಲಡಿಯಿಡುವ ಬಯಕೆಯುಂಟೇ ? ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ ಭಯವುಂಟೇನಯ್ಯಾ ? ನಿರ್ಮಾಯಕಂಗೆ ಮಾಯದ ಹಂಗುಂಟೇ ? ನಿವ್ರ್ಯಸನಿಗೆ ವ್ಯಸನದ ಹಂಗುಂಟೇ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದಾತಂಗೆ ಅನ್ಯದೈವದ ಹಂಗುಂಟೇ ?
--------------
ಹೇಮಗಲ್ಲ ಹಂಪ
ಪೃಥ್ವಿ ಆಕಾಶದ ಮಧ್ಯದಲ್ಲಿ ಖೇಚರ ಮಂಡಲ : ಆ ಮಂಡಲದರಸು ವಿಹಂಗರಾಜ, ಮರೀಚಿಕ ಪ್ರಧಾನ, ಮಹೀತಳ ತಳವಾರ, ಇಂತೀ ಮಂಡಲ ಸುರಕ್ಷದಲ್ಲಿ ಇರುತಿರಲಾಗಿ, ಗೋರಕ್ಷನೆಂಬ ಅರಸು ಮುತ್ತಿದ ಮಂಡಲವ. ಪಟ್ಟಣ ಕೋಳುಹೋಗದು, ಮುತ್ತಿದರಸು ಬಿಟ್ಟುಹೋಗ. ಇದ ಸಂತೈಸಲಂಜಿ, ಅಲೇಖಮಯನಾದ ಶೂನ್ಯ ಕಲ್ಲಿನೊಳಹೊಕ್ಕು, ಎಲ್ಲರ ಗೆದ್ದ.
--------------
ವಚನಭಂಡಾರಿ ಶಾಂತರಸ
-->