ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನೇ ಬಲ್ಲವನೆಂದು ಇಲ್ಲದ ಹುಸಿಯ ಹುಸಿವ, ಗೆಲ್ಲಗೂಳಿತನಕ್ಕೆ ವಲ್ಲಭನೆಂದು, ಇವರೆಲ್ಲರೂ ಅರಿಯರೆಂದು ಬಲ್ಲಹ ನಾನೆಂದು ನಿಲ್ಲದೆ ಹೋರುವ ಖುಲ್ಲರ ನೋಡಾ. ಕಳ್ಳರ ಹಾದಿಯೊಳಗಿಪ್ಪ ಅನುವಿನ ನೆರೆಮೊಂಡನಂತೆ, ಕೊಳ್ಳದ ಬೆಲೆಯ ಬೇಡಿ ಕಾಡುವ ಖುಲ್ಲನ ಬಲ್ಲತನದಂತೆ, ಇವರೆಲ್ಲರ ಹಿರಿಯರೆಂದಡೆ, ಕಲ್ಲಿಯೊಳಗಾದ ಮೃಗದಂತೆ, ಇವರೆಲ್ಲಕ್ಕೂ ಬಲ್ಲತನವೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಾಧನೆಯಲ್ಲಿ ಬೆಳೆದ ವಿಹಂಗನಂತೆ, ದೀಹವಾದ ಮೃಗದಂತೆ, ಜಾತಿಜಾತಿಯ ಕೊಂದು, ಭೂತಹಿತವುಂಟೆ ? ಸಮಯ ಸಮಯವ ಕೊಂದು, ಬಲ್ಲಹ ಬಲ್ಲವನ ಸೊಲ್ಲು ಒಳ್ಳಿತ್ತಲ್ಲಾಯೆಂದು ಎಲ್ಲರೊಳಗೆ ಹೇಳುವ ಖುಲ್ಲನ ಬಲ್ಲತನವನೊಲ್ಲ, ಅರ್ಕೇಶ್ವರಲಿಂಗ.
--------------
ಮಧುವಯ್ಯ
ತಡೆವನ ಬಾಗಿಲಲ್ಲಿ ನಿಂದು, ಕರೆಯಿಸಿಕೊಂಡು ಹೋದೆಹೆನೆಂಬ ಒಡೆಯತನವೇಕೆ ? ಇವೆಲ್ಲವನರಿದು ಬಿಟ್ಟು, ತಿರುಗಿ ಅಲ್ಲಿಗೆ ಬಹ ಸ್ಥಾಣುವಿನ ಮರೆಯ ಖುಲ್ಲನ ಹಸುವಿನಂತಾಯಿತ್ತು, ನಿಮ್ಮ ಅರಿವು, ಐಘಟದೂರ ರಾಮೇಶ್ವರಲಿಂಗವನರಿಯದೆ.
--------------
ಮೆರೆಮಿಂಡಯ್ಯ
-->